ರಾಯಚೂರು. ನಗರಸಭೆಗೆ ಕಳೆದ 6-7 ವರ್ಷಗಳಿಂದ ತೆರಿಗೆ ಪಾವತಿಸದೇ ಬಹುತೇಕ ವಾಣಿಜ್ಯ ಮಳಿಗೆ, ಹೋಟೆಲ್ ಸೇರಿದಂತೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ನಗರಸಭೆ ಪೌರಾಯಕ್ತರು ಗುರುಸಿದ್ದಯ್ಯ ಅವರು ಬೀಗ ಹಾಕಿ ಬಂದ್ ಮಾಡಿದರು.
ನಗರದಲ್ಲಿರುವ ವಾಣಿಜ್ಯ ಮಳಿಗೆ, ಅಂಗಡಿ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿದಂತೆ ಅನೇಕ ವಾಣಿಜ್ಯ ಮಳಿಗೆಗಳು ನಗರಸಭೆಗೆ ಕಳೆದ 6-7 ವರ್ಷಗಳಿಂದ ತೆರಿಗೆ ಪಾವತಿಸಿಲ್ಲ, ಜೊತೆಗೆ ನಗರಸಭೆಯಿಂದ ಟ್ರೇಡ್ ಲೈಸೆನ್ಸ್ ಪಡೆದಿಲ್ಲ, ಸಾಕಷ್ಟು ಟ್ರೇಡ್ ಲೈಸೆನ್ಸ್ ಪಡೆದವರು 5-6 ವರ್ಷಗಳಿಂದ ರಿನೆವೆಲ್ ಮಾಡಿಸಿಲ್ಲ, ಸಾಕಷ್ಟು ನಳ ಸಂಪರ್ಕ ಪಡೆದು ಕೊಂಡಿದ್ದು, ತೆರಿಗೆ ಉಳಿಸಿಕೊಂಡಿದ್ದಾರೆ.
ಇದರಿಂದ ನಗರಸಭೆಗೆ ನಷ್ಟ ಉಂಟು ಮಾಡಿದ್ದರಿಂದ ಸುಮಾರು 10-15 ವಾಣಿಜ್ಯ ಮಳಿಗೆಗಳನ್ನು ಲಾಕ್ ಮಾಡಿ ಬಂದ್ ಮಾಡಲಾಗಿದೆ.
ಲಕ್ಷ್ಮಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಕಳೆದ 4 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂ ಡಿದ್ದು, ಸ್ಥಳದಲ್ಲಿಯೇ 7.03 ಲಕ್ಷ ರೂಗಳ ಚೆಕ್ ನಗರಸಭೆ ಪೌರಾಯುಕ್ತರಿಗೆ ನೀಡಿದರು.
ನಳ ಸಂಪರ್ಕ ಪಡೆದ ಅಂಗಡಿಗಳ ತೆರಿಗೆ ಪಾವತಿ ಮಾಡದೇ ಇರುವುದರಿಂದ ನಳ ಸಂಪರ್ಕ ಕಡಿತಗೊಳಿಸಿದ್ದಾರೆ.
ಎಲ್ಲಾ ವಾಣಿಜ್ಯ ಮಳಿಗೆ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಸೇರಿದಂತೆ ಇಂದು ಸಂಜೆಯೊಳಗೆ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಲು ಮಳಿಗೆಗಳ ಮಾಲೀಕರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿ ಅನೇಕರು ಇದ್ದರು.