Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಗಮನ ಸೆಳೆದ ಆರ್.ಆರ್.ಎಸ್ ಪಥಸಂಚಲನ

ಗಮನ ಸೆಳೆದ ಆರ್.ಆರ್.ಎಸ್ ಪಥಸಂಚಲನ

ರಾಯಚೂರು : ನಗರದಲ್ಲಿಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯ ದಶಮಿ ಅಂಗವಾಗಿ ಅಕರ್ಷಕ ಪಥಸಂಚಲನ ಜರುಗಿತು.

ನಗರದ ಗದ್ವಾಲ್ ರಸ್ತೆಯ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಭಗವಾಧ್ಜ ಜಾರೋಹಣ ಮೂಲಕ ಆರಂಭಗೊಂಡ ಪಥಸಂಚಲನ ಬಸವನಭಾವಿ ವೃತ್ತ ಮೂಲಕ ಪಟೇಲ್ ಸರ್ಕಲ್‌, ಶೆಟ್ಟಿಬಾವಿ ವೃತ್ತ , ಬಂಗಾರ ಬಜಾರ್‌ ಸೇರಿದಂತೆ ನಗರದ ಮುಖ್ಯ ಮಾರುಕಟ್ಟೆಯಲ್ಲಿ ವರ್ತಕರು ಆರ್.ಎಸ್.ಎಸ್. ಸ್ವಯಂ ಸೇವಕರನ್ನು ಸ್ವಾಗತಿಸುತ್ತ ಕಾರ್ಯಕರ್ತರ ಮೇಲೆ ಹೂ ಮಳೆಗರೆದರು.
ಅಭಿಮಾನಿಗಳು ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ಸ್ವಯಂ ಸೇವಕರನ್ನು ಜನರು ಸ್ವಾಗತಿಸಿದರು. ಅಲ್ಲದೇ ಚಿಕ್ಕ ಚಿಕ್ಕ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ಅದರಲ್ಲೂ ಮಾಜಿ ಸಂಸದರಾದ ಬಿ.ವಿ ನಾಯಕರು , ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್ , ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಪಥಸಂಚಲನದಲ್ಲಿದ್ದ ಗಣವೇಷಾಧಿಕಾರಿಗಳ ಮೇಲೆ ಹೂ ಮಳೆ‌ ಸುರಿಸಿ ಸ್ವಾಗತಿಸಿದರು.
ಪಥಸಂಚಲನವು ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿ ಬಂದೋಬಸ್ತಿಯಲ್ಲಿ ಆಕರ್ಷಕವಾಗಿ ಸಾಗಿತು.

Megha News