ರಾಯಚೂರು ನ 10:- ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕ್ರಾಂತಿತ್ವ ಸಂಪೂರ್ಣ ಇಲ್ಲವಾಗಿಸುವ ಕೃಷಿಯನ್ನು ಆರ್ ಎಸ್ ಎಸ್ ಕಳೆದ 20 ವರ್ಷಗಳಿಂದ ವ್ಯವಸ್ಥಿತವಾಗಿ ನಡೆಸುತ್ತಿದೆ ಎಂದು ಹೋರಾಟಗಾರ ಮತ್ತು ಸಾಂಸ್ಕೃತಿಕ ಚಿಂತಕರಾದ ಕೊಟಿಗಾನಹಳ್ಳಿ ರಾಮಯ್ಯ ಹೇಳಿದರು.
- ಅವರಿಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರಲ್ಲಿ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮ ನೂರರ ಸಂಬ್ದ್ರಮ ಕಾರ್ಯಕ್ರಮ ಉದ್ಘಾಟೊಸಿ ಮಾತನಾಡಿದರು. ಮನೆ ಮನೆಗೆ ಅಂಬೇಡ್ಕರ್ ಈ ಕಾರ್ಯಕ್ರಮ ಅತ್ಯಂತ ಉತ್ತಮ ಮತ್ತು ಸಮಯೋಚಿತವಾಗಿದೆ. ಆದರೆ, ಈ ಒಂದೇ ಕಾರ್ಯಕ್ರಮದಿಂದ ನಮ್ಮ ಉದ್ದೇಶ ಈಡೇರಲು ಸಾಧ್ಯವಿಲ್ಲ.
ಅಂಬೇಡ್ಕರ್ ಅವರನ್ನು ಓದುವ ವಿಧಾನ ಮತ್ತು ಅದರ ಅಗತ್ಯತೆಯನ್ನು ನಾವು ಪ್ರತಿಯೊಬ್ಬರಿಗೆ ಹೇಳುವ ಅವಶ್ಯಕತೆ ಇದೆ. ಕಳೆದ 20 ವರ್ಷಗಳಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕ್ರಾಂತಿ ವಿಚಾರದ ಕಾಂತಿತ್ವ ಸಂಪೂರ್ಣ ಇಲ್ಲವಾಗಿಸುವ ವ್ಯವಸ್ಥಿತ ಕುತಂತ್ರ ಆರ್ ಎಸ್ ಎಸ್ ನಡೆಸಿದೆ.
ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತ ದೇಶವನ್ನು ಮಾತ್ರವಲ್ಲ, ಪ್ರಪಂಚವನ್ನು ಮಾತ್ರವಲ್ಲ, ಸಂಪೂರ್ಣ ಮನಕುಲವನ್ನೇ ಓದಿದಂತೆ. ಅಂಬೇಡ್ಕರ್ ಅವರು ತಮ್ಮ ಹೋರಾಟ ಮತ್ತು ವಿಚಾರ ಚಿಂತನೆ ಮೂಲಕ ಮಾನವ ಜನಾಂಗ, ದೇಶದ ಕಣ್ಣು ತೆರೆಸಿದ ಮಹಾನ್ ನಾಯಕರಾಗಿದ್ದಾರೆ.
ಇಡೀ ಭಾರತ ದೇಶವೇ ಒಂದು ಮಗುವಾದರೆ, ಆ ಮಗು ಬದುಕಿ ಉಳಿಯಲು ಡಾ.ಅಂಬೇಡ್ಕರ್ ಅವರು ಎದೆಯಲಾಗಿದ್ದಾರೆ. ಇಂಥ ಅಮೃತ ಹಾಲನ್ನು ವಿಷ ಮಾಡುವ ಕುತಂತ್ರ ವ್ಯವಸ್ಥಿತವಾಗಿ ನಡೆದಿದೆ. ಇದರ ಬಗ್ಗೆ ಪ್ರತಿಯೊಬ್ಬರು ನಾವು ಎಚ್ಚರಿಂದಿರಬೇಕಾಗಿದೆ. ಮತ್ತು ಯಾವ ರೀತಿಯಲ್ಲಿ, ಯಾವ ವಿಚಾರಗಳನ್ನು ನಾವು ತಿಳಿಯಬೇಕೆನ್ನುವ ಜಾಗೃತಿಯನ್ನು ಒಂದು ಬೇಕಾಗಿದೆ.
ಕೆಲ ವ್ಯಕ್ತಿಗಳ ಮೂಲಕ ಸಾಮಾಜಿಕ ಜಾಲತಾಣಗಳ ಮೂಲಕ ವಿಚಾರಗಳನ್ನು ಕಲಿಸಿದ ಗೊಳಿಸುವ ಅಂಬೇಡ್ಕರ್ ಕ್ರಾಂತಿಯ ಮಹತ್ವವನ್ನು ಬೇರ್ಪಡಿಸಿ ಕೇವಲ ಸುಧಾರಣೆಗಳಿಗೆ ಸೀಮಿತಗೊಳಿಸುವ ಪ್ರಯತ್ನ ನಡೆದಿದೆ. ಇದಕ್ಕೆ ನಮ್ಮ ಜಲ ಬಲಿಯಾಗದಂತೆ, ಎಚ್ಚರಿಸುವ ಜವಾಬ್ದಾರಿಯು ನಮ್ಮ ಮೇಲಿದೆ.
ಈ ಕಾರ್ಯಕ್ರಮದಲ್ಲಿ ಮಾನಸಯ್ಯ ಸುರೇಶ್, ಎಂ ಆರ್ ಬೇರಿ, ತಾಯರಾಜ್, ಹೇಮರಾಜ್ ಅಸ್ಕಿಹಾಳ್ ಮಲ್ಲೇಶ್ ಕೊಲಮಿ ಸೇತಿದಂತೆ ಅನೇಕರು ಉಪಸ್ಥಿತರಿದ್ದರು.