ರಾಯಚೂರು. ದ್ವಿಚಕ್ರ ವಾಹನಕ್ಕೆ ಅಕಸ್ಮಿಕವಾಗಿ ಬೆಂಕಿ ಹತ್ತಿಕೊಂಡ ಘಟನೆ ನಗರದ ಶೆಟ್ಟಿಭಾವಿ ವೃತ್ತದಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಓವರ್ ಫುಲ್ ಆಗಿ ಹೊರಬರುತ್ತಿದ್ದು ಈ ವೇಳೆ ಬೈಕ್ಗೆ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯರು ಬೈಕ್ಗೆ ಹತ್ತಿಕೊಂಡಿದ್ದನ್ನು ನೀರು ಹಾಕಿ ನಂದಿಸಿದರೂ ಪೆಟ್ರೋಲ್ ಹೊರ ಹರಿಯುತ್ತಿದ್ದರಿಂದ ಬೆಂಕಿಯ ಕೆನ್ನಾಲಿಗೆ ಬೈಕ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೈಕ್ ಸವಾರನಿಗೆ ಯಾವುದೇ ಪ್ರಾಣಾಪಾಯ ವಾಗಿಲ್ಲ, ಅಪಾಯದಿಂದ ಪಾರಾಗಿದ್ದಾನೆ.
ಈ ಕುರಿತು ಸದರ್ ಬಜಾರ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.