ರಾಯಚೂರು. ಕಾರು ಆಟೋ ನಡುವೆ ಸಂಭವಿಸಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ.
ಮೃತಪಟ್ಟರು ವ್ಯಕ್ತಿ ಮಧುಸೂದನ್(40) ಹೊಸಪೇಟೆ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಯಕ್ಲಾಸಪೂರ ಸಮೀಪದ ಬೈಪಾಸ್ ರಾಜ್ಯ ಹೆದ್ದಾರಿ ಸಮೀಪ ಸೋಮವಾರ ಸಂಜೆ ಘಟನೆ ಸಂಬವಿಸಿತ್ತು. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದು ಮತ್ತೋರ್ವ ವ್ಯಕ್ತಿ ಮಧುಸೂದನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬೀರಲಿಂಗಪ್ಪ (58) ಅವರ ಕಾಲು ಮುರಿದು ಹೋಗಿದೆ. ಗಂಭೀರವಾಗಿ ಗಾಯಗೊಂಡವರು ನಾಗಮ್ಮ (30), ಬಸಮ್ಮ (57), ಉಮಾದೇವಿ (30), ಸುರೇಶ್ (40) ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.