ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತಂತೆ ಕೊನೆಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಜಗತ್ ಪ್ರಕಾಶ ನಡ್ಡ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಏಮ್ಸ್ ಮಂಜೂರಾತಿ ಕುರಿತು ಹಣಕಾಸು ಇಲಾಖೆ ಇಲಾಖೆಯಿಂದ ಅನುಮೋದನೆ ನೀಡಲು ಪರಿಶೀಲನಲ್ಲಿದೆ ಎಂದುತಿಳಿಸಿದ್ದಾರೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ 994 ದಿನಗಳಿಂದ ಹೋರಾಟ ಮಂದುವರೆದಿದೆ. ಏಮ್ಸ್ ಸ್ಥಾಪನೆ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024 ಜೂನ್.29 ಮತ್ತುನವಂಬರ 28 ರಂದು ಎರಡು ಬಾರಿ ಪತ್ರ ಬರೆದಿದ್ದರೂ ಕೇಂದ್ರದಿಂದ ಉತ್ತರವೇ ಬಂದಿರಲಿಲ್ಲ. ಆದರೀಗ 2025 ಜನವರಿ 14 ರಂದು ಪತ್ರ ಬರೆದು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತಾಗಿ ಹಣಕಾಸು ಇಲಾಖೆಯ ತಾತ್ವಿಕ ಅನುಮೋದನೆ ನೀಡಲು ಕೋರಿದ್ದು ಅಲ್ಲದೇ ರಾಷ್ಟಿçÃಯ ಆರೋಗ್ಯ ಮಿಷನ ಯೋಜನೆಯಡಿ ಇತರೆ ಪ್ರಮುಖ ಯೋಜನೆಗಳಲ್ಲಿಯೂ ಅನುದಾನ ನೀಡಲು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತೃತೀಯ ಹಂತದಲ್ಲಿ ಆರೋಗ್ಯ ಸೌಲಭ್ಯ ವಿಸ್ತರಣೆ, ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ(ಹಂಚಕೆ) ಆಧಾರದ ಮೇಲೇ ರಾಜ್ಯದ ಹುಬ್ಬಳ್ಳಿ, ವಿಜಯನಗರ ಮತ್ತು ಬೆಂಗಳೂರು ವೈಧ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.ರಾಷ್ಟಿçÃಯ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯಕ್ರಮಗಳನ್ನು ಅವಶ್ಯಕತೆ ಆಧಾರದ ಮೇಲೆ ಬಲಪಡಿಸಲು ಆರ್ಥಿಕ ಮತ್ತು ತಾಂತ್ರಿಕ ಬೆಂಬಲ ಒದಗಿಸುವದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕ ರಾಜ್ಯಕ್ಕೆ 2021-22ನೇ ಹಣಕಾಸು ವರ್ಷದಿಂದ 2024-25ನೇ ಹಣಕಾಸು ವರ್ಷದವರೆಗೆ (2024-25ನೇ ಹಣಕಾಸು ವರ್ಷದಲ್ಲಿ ರೂ. 939.65 ಕೋಟಿ (17.12.2024 ರಂತೆ) ಸೇರಿದಂತೆ) 4648.63 ಕೋಟಿ (ಕೇಂದ್ರ ಸರ್ಕಾರದ ಅನುದಾನ) ಬಿಡುಗಡೆ ಮಾಡಲಾಗಿದೆ. ಅದೇ ರೀತಿ, Pಒ-ಂಃಊIಒ ಅಡಿಯಲ್ಲಿ, 2021-22ನೇ ಹಣಕಾಸು ವರ್ಷದಿಂದ 2024-25ನೇ ಹಣಕಾಸು ವರ್ಷಕ್ಕೆ (2024-25ನೇ ಹಣಕಾಸು ವರ್ಷದಲ್ಲಿ ರೂ. 45.88 ಕೋಟಿ (17.12.2024 ರಂತೆ) ಸೇರಿದಂತೆ) 194.80 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ರಾಯಚೂರು ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ, ರಾಜ್ಯ ಸರ್ಕಾರವು ಕಾರ್ಯಕ್ರಮ ಅನುಷ್ಠಾನ ಯೋಜನೆಯಿ ಪ್ರಸ್ತಾವನೆಗಳನ್ನು ಸೇರಿಸಿದರೆ, ರಾಜ್ಯಕ್ಕೆ ನಿಗದಿಪಡಿಸಿದ ಸಂಪನ್ಮೂಲ ಮಾರ್ಗಸೂಚಿಗಳೊಳಗೆ ಇದ್ದರೆ ಈ ಸಚಿವಾಲಯವು ಅವುಗಳನ್ನು ಪರಿಗಣಿಸಲು ಸಂತೋಷವಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್ ಘೋಷಣೆ ಮುನ್ನ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತಂತೆ ಬರೆದಿರುವ ಪತ್ರದಲ್ಲಿ ಹಲವಾರು ಅನುಮಾನಗಳಿಗೂ ದಾರಿಮಾಡಿಕೊಟ್ಟಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆಯುವದು ಸರ್ಕಾರಕ್ಕೆ ಕಷ್ಟದ ಕೆಲಸವೇನಲ್ಲ. ಹಣಕಾಸು ಇಲಾಖೆ ಒಟ್ಟಾರೆ ಹಂಚಿಕೆ ಪರಿಶೀಲನೆ ಮೇಲೆ ಅವಲಂಭಿತವಾಗಿದೆ ಎಂದು ಉಲ್ಲೇಖಿಸಿರುವದು ನಯವಾಗಿಯೇ ಸಾಧ್ಯವಾಗುವದಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಿದೆ. ಕೇಂದ್ರ ಈಗಾಗಲೇ ಏಮ್ಸ್ ಘೋಷಣೆ ಮಾಡಿದ್ದು ಪ್ರಸ್ತಕ ಸಾಲಿನ ಬಜೆಟ್‌ನಲ್ಲಿ ಅನುದಾನ ಖಾತ್ರಿ ಘೋಷಣೆ ಮಾಡಿದರೆ ಬಹುದಿನ ನಿರೀಕ್ಷೆ ಸಾಕಾರವಾಗುವ ಆಶಾಭಾವನೆ ಈ ಪ್ರದೇಶದ ಜನರದ್ದಾಗಿದೆ.