ರಾಯಚೂರು: ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ನೇತಾಜಿನಗರದಿಂದ ಮೋಚಿವಾಡ ಕೂಡು ರಸ್ತೆ ಅಗಲೀಕರಣ ಕಾಮಗಾರಿಗೆ ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು ಮಾರ್ಕಿಂಗ್ ನಡೆಸಿದರು.
ನೇತಾಜಿನಗರ ಬಡಾವಣೆ ಸದಸ್ಯ, ಉಪ ಮಹಾಪೌರ ಸಾಜೀದ್ ಸಮೀರ್ ಹಾಗೂ ಅಭಿವೃದ್ದಿ ಆಯುಕ್ತ ಸಿದ್ದಯ್ಯ ಹೀರೆಮಠ ಇವರ ಉಪಸ್ಥಿತಿಯಲ್ಲಿ ಮಾರ್ಕಿಂಗ್ ಕೆಲಸ ಪ್ರಾರಂಭಿಸಲಾಯಿತು. ನಿವಾಸಿಗಳೊಂದಿಗೆ ಹಲುವುಸುತ್ತಿನ ಮಾತುಕತೆ ನಡೆಸಿದ್ದರೂ ಫಲಪ್ರದವಾಗಿರಲಿಲ್ಲ. ಈ ಬಾರಿ ಸಂತ್ರಸ್ಥರೊಂದಿಗೆ ಸಭೆ ನಡೆಸಿ ಸಮ್ಮತಿ ಮೇಲೆಗೆ ರಸ್ತೆ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಐದು ಅಡಿ ಅಗಲ ತೆರವಿಗೆ ನಿರ್ಧರಿಸಿ ಮಾರ್ಕಿಂಗ್ ಮಾಡಲಾಗುತ್ತದೆ.
ಆಕ್ಷೇಪಣೆಗಳನ್ನುಪರಿಶೀಲಿಸಿ ತೆರವು ಕಾರ್ಯಚರಣೆ ನಡೆಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಬಡಾವಣೆ ನಿವಾಸಿಗಳು, ಪಾಲಿಕೆ ಸಿಬ್ಬಂದಿಗಳಿದ್ದರು.