ರಾಯಚೂರು:ರಾಯಚೂರಿಗೆ ಏಮ್ಸ್ ಮಂಜೂರು ಮಾಡಿಸಲು ತಾಕತ್ತು ಬೇಕಿಲ್ಲ, ಅದಕ್ಕೆ ಬುದ್ದಿ ಬೇಕು, ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಕ್ಯಾಬಿನೆಟ್‌ನಲ್ಲಿ ಏಮ್ಸ್ ವಿಚಾರವನ್ನು ಪಾಸ್ ಮಾಡಿಸಿದರೆ ಏಮ್ಸ್ ರಾಯಚೂರಿಗೆ ಮಂಜೂರು ಮಾಡಿಸಲು ಶೇ.100ರಷ್ಟು ಶ್ರಮಿಸುವುದಾಗಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಅವರಿಂದು ನಗರದ ರಾಂಪೂರು ಜಲಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಇತ್ತೀಚೆಗೆ ಸಣ್ಣ ನೀರಾವರಿ ಎನ್.ಎಸ್.ಬೋಸರಾಜು ಏಮ್ಸ್ ವಿಚಾರವಾಗಿ ರಾಜ್ಯ ಸರ್ಕಾರದಿಂದ ಕ್ಯಾಬಿನೆಟ್‌ನಲ್ಲಿ ಏಮ್ಸ್ ರಾಯಚೂರಿಗೆ ನೀಡುವ ಕುರಿತು ಪ್ರಸ್ತಾವನೆಯನ್ನು ಪಾಸ್ ಮಾಡಿಸಲಾಗುತ್ತದೆ ಬಿಜೆಪಿಯವರಿಗೆ ಏಮ್ಸ್ ರಾಯಚೂರಿಗೆ ಮಂಜೂರು ಮಾಡಿಸಲು ತಾಕತ್ತು ಇದೆಯೇ? ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ರಾಯಚೂರು ವಿಮಾನ ನಿಲ್ದಾಣಕ್ಕೆ ಕೇಂದ್ರ ಪರಿಸರ ಇಲಾಖೆಅನುಮತಿ- ಎನ್.ಎಸ್.ಬೋಸರಾಜ
ಕೇಂದ್ರ ಸರ್ಕಾರ ರಾಷ್ಟçದಲ್ಲಿ ಏಮ್ಸ್ ಮಂಜೂರು ಮಾಡುವ ಕುರಿತು ನಿರ್ಧಾರ ಕೈಗೊಂಡ ಸಮಯದಲ್ಲಿ ಕರ್ನಾಟಕದಲ್ಲಿ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಕುರಿತು ಹೆಸರನ್ನು ಪ್ರಸ್ತಪಿಸಲಾಗುವುದು. ಏಮ್ಸ್ ಮಂಜೂರು ಮಾಡಿಸಲು ತಾಕತ್ತು ಬೇಕಿಲ್ಲ ಎಂದರು.
ರಾಜ್ಯ ಸರ್ಕಾರ ಏಮ್ಸ್ ಮಂಜೂರಿಗೆ ಏನು ಮಾಡಬೇಕು ಅದನ್ನು ಮೊದಲು ಮಾಡಲಿ ಕದ್ದು ಮುಚ್ಚಿ ಪತ್ರಗಳನ್ನು ಬರೆಯುವುದಲ್ಲ. ಕಾನೂನಾತ್ಮಕವಾಗಿ ಏಮ್ಸ್ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಿ ಎಂದರು.
ರಾಜ್ಯ ಸರ್ಕಾರ ಕೆಲವು ಇಲಾಖೆಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂಬ ಗುತ್ತಿಗೆದಾರರ ಹೇಳಿಕೆ ಇದೇ ಮೊದಲಲ್ಲ. ಈ ಮುಂಚೆಯೇ ಇಂತಹ ಆರೋಪಗಳಾಗಿವೆ. ರಾಜ್ಯ ಸರ್ಕಾರ ಅದಕ್ಕೆ ಏನು ಉತ್ತರ ಕೊಡಬೇಕು ಅದನ್ನೇ ಕೊಡುತ್ತಾರೆ. ಕೇವಲ ದೂರು ನೀಡಿ, ಸಾಕ್ಷಿಗಳ ಮೂಲಕ ಸಾಬೀತುಪಡಿಸಲಿ ಎಂದು ಹೇಳುತ್ತಾರೆ.ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿದಾಗ ಸಾಕ್ಷಿಗಳನ್ನು ಕಾಂಗ್ರೆಸ್‌ನವರು ತೋರಿಸಿದ್ದರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ನಗರಸಭೆ ಸದಸ್ಯರಾದ ಇ.ಶಶಿರಾಜ, ಎನ್.ಕೆ.ನಾಗರಾಜ, ವಿ.ನಾಗರಾಜ, ಪ್ರಮುಖರಾದ ರವೀಂದ್ರ ಜಲ್ದಾರ, ಕಡಗೋಲ ಆಂಜನೇಯ್ಯ, ನರಸರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಸನ್ನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.