ಮಾನ್ವಿ. ತಾಲ್ಲೂಕಿನ ಭೋಗಾವತಿ ಗ್ರಾಮದಲ್ಲಿ 2022-23ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಪರಿಹಾರ ಅಕ್ರಮಕ್ಕೆ ಸಂಬಂಧಿಸಿದಂತೆ ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ್ ಸಾಹೇಬ್ ನೀಡಿದ ದೂರಿನ ಅನ್ವಯ 22 ಜನರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಜಮೀನಿನ ಮೂಲ ರೈತರಿಗೆ ತಿಳಿಯದಂತೆ ತಾವೇ ಖುದ್ದಾಗಿ ವಿಮಾ ಕಂತು ಪಾವತಿಸಿ ತಮ್ಮ ಖಾತೆಗಳಿಗೆ ವಿಮಾ ಪರಿಹಾರ ಮೊತ್ತವನ್ನು ವರ್ಗಾಯಿಸಿಕೊಂಡಿರುವುದು ಈಚೆಗೆ ಬೆಳಕಿಗೆ ಬಂದಿದೆ. 22 ಜನ ಆರೋಪಿಗಳು ಭೋಗಾವತಿ ಗ್ರಾಮದ 226 ಜನ ರೈತರ ಜಮೀನಿಗೆ 2022ರ ಜುಲೈ 1ರಿಂದ ಆಗಸ್ಟ್ 16ರವರೆಗೆ ಭತ್ತದ ಬೆಳೆ ವಿಮಾ ಕಂತು ಪಾವತಿಸಿದ್ದರು. 2023ರ ಏಪ್ರಿಲ್ 12ರಂದು ಆರೋಪಿಗಳು 1,10,81,822 ರೂ. ಪರಿಹಾರ ಮೊತ್ತವನ್ನು ತಮ್ಮ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು.
ಆರೋಪಿಗಳ ವಿವರ: ಅನ್ನಪೂರ್ಣ ಶರಬಯ್ಯ ಸ್ವಾಮಿ ಭೋಗಾವತಿ, ಬಸಮ್ಮ ಭೋಗಾವತಿ, ದೀಪಾ.ಬಿ ಭೋಗಾವತಿ, ದೊಡ್ಡಬಸಪ್ಪಗೌಡ ತಂದೆ ಶರಣಪ್ಪಗೌಡ ಭೋಗಾವತಿ, ಈಗಲಪಾಟಿ ಶ್ರೀಧರ ತಂದೆ ಶ್ರೀನಿವಾಸ ಭೋಗಾವತಿ, ಪ್ರಭು ಗೌಡ ತಂದೆ ಯಮನಪ್ಪ ಭೋಗಾವತಿ, ಪ್ರಭು ನಾಥ ರೆಡ್ಡಿ ತಂದೆ ಬಸಲಿಂಗಪ್ಪ, ಪ್ರಶಾಂತ ಕುಮಾರ, ಹನುಮೇಶ ತಂದೆ ಭೀಮಣ್ಣ ರಾಜ ಲಬಂಡಾ, ಲಕ್ಷ್ಮಿದೇವಿ ಗಂಡ ಗೌಡಪ್ಪ ಭೋಗಾ ವತಿ, ಮಲ್ಲಮ್ಮ ಗಂಡ ಬಸವರಾಜ ಗೋನವಾರ, ನಾಗರಾಜ ಭೋಗಾವತಿ, ನೀಲಮ್ಮ ಭೋಗಾ ವತಿ, ಪ್ರವೀಣ್.ಜಿ.ಬಿ ತಂದೆ ಬಸವರಾಜಪ್ಪ ಜಿ.ಬಿ ಭೋಗಾವತಿ, ಆರ್. ವೀರೇಶ ಭೋಗಾವತಿ, ರುದ್ರಗೌಡ ಪೋ.ಪಾ.ತಂದೆ ಗೌಡಪ್ಪಗೌಡ ಪೋ.ಪಾ ಭೋಗಾವತಿ, ಸವಿತಾ ಡಿ.ಗಂಡ ಪ್ರಭುನಾಥರೆಡ್ಡಿ ಭೋಗಾವತಿ, ಶಂಕರಲಿಂಗ ಗೋರವಾರ ಭೋಗಾವತಿ, ಶರಬಯ್ಯಸ್ವಾಮಿ ಭೋಗಾವತಿ, ಶರಣಗೌಡ ಪೋ.ಪಾ ತಂದೆ ದೊಡ್ಡಬಸನಗೌಡ ಭೋಗಾವತಿ, ಸೌಮ್ಯ ಕುಂಟಗೌಡರ್ ತಂದೆ ಗೌರಪ್ಪ ಭೋಗಾವತಿ, ವಿರುಪಾಕ್ಷರೆಡ್ಡಿ ತಂದೆ ಶರಣಪ್ಪಗೌಡ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.