ರಾಯಚೂರು.ಆರ್ಟಿಪಿಎಸ್ ಮತ್ತು ವೈಟಿಪಿಎಸ್ ಶಾಖೋತ್ಪನ್ನ ಘಟಕಗಳಿಗೆ ಸರಬರಾಜು ಆಗುವ ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಗರೆಣಿ ಕಲ್ಲಿದ್ದಲು ಘಟಕದಿಂದ ಪೂರೈಕೆಯಾಗುವ ಕಲ್ಲಿದ್ದಲನ್ನು ಯರಮರಸ್ ರೈಲು ನಿಲ್ದಾಣದ ಬಳಿ ಗುತ್ತಿಗೆದಾರ ಶ್ರೀಗುರು ರಾಘವೇಂದ್ರ ಎಂಟರ್ ಪ್ರೈಸೆಸ್ ಮಾಲೀಕ ಶ್ರೀನಿವಾಸಲು ಹಾಗೂ ಯರಮರಸ್ ರೈಲು ನಿಲ್ದಾಣ ಸ್ಟೇಷನ್ ಮಾಸ್ಟರ್ ಸೇರಿ ಕಳ್ಳತನ ಮಾಡಿದ್ದಾರೆ ಎಂದು ವೈಟಿಪಿಎಸ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಂದ್ರ ದೂರು ನೀಡಿದ್ದಾರೆ.
ಇದೇ ತಿಂಗಳು ೧೯ ರಿಂದ ೨೧ ರ ಅವಧಿಯಲ್ಲಿ ವಿದ್ಯುತ್ ಘಟಕಗಳಿಗೆ ಸರಬುರಾಜ ಆದ ಕಲ್ಲಿದ್ದಲನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಾಣೆ ಮಾಡಿದ್ದರು.ಈ ಕುರಿತು ಯತಿರಾಜ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಬೇಟಿ ಪರಿಶೀಲನೆ ನಢಸಿತ್ತು. ೧೨೦ ಮೆ.ಟ ಕಲ್ಲಿದ್ದಲು ಅಕ್ರಮ ಸಾಗಾಣೆ ನಡೆದಿರುವದು ಪತ್ತೆಯಾಗಿದೆ ಸುಮಾರು ಐದು ಲಕ್ಷ ಮೌಲ್ಯದ ಕಲ್ಲಿದ್ದಲು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಇಷ್ಟೋಂದು ಪ್ರಮಾಣದ ಕಲ್ಲಿದ್ದಲು ಅಕ್ರಮವಾಗಿ ಸಂಗ್ರಹಿಸಿದ್ದರು ಕಲ್ಲಿದ್ದಲು ವಿಭಾಗದ ಅಧಿಕಾರಿಗಳು ಗಮನಹರಿಸದೇ ಇರುವದು ಅನುಮಾನಕ್ಕೆ ಕಾರಣವಾಗಿದೆ.ಎಷ್ಟು ದಿನದಿಂದ ಕಳ್ಳ ವ್ಯವಹಾರ ನಡೆಯುತ್ತಿತ್ತು ಎಂಬುದು ತನಿಖೆಯಿಂದ ಬಯಲಾಗಬೇಕಿದೆ.
Megha News > Crime News > ಕಲ್ಲಿದ್ದಲು ಕಳ್ಳತನ: ಇಬ್ಬರ ವಿರುದ್ದ ಪ್ರಕರಣ ದಾಖಲು
ಕಲ್ಲಿದ್ದಲು ಕಳ್ಳತನ: ಇಬ್ಬರ ವಿರುದ್ದ ಪ್ರಕರಣ ದಾಖಲು
Tayappa - Raichur25/11/2023
posted on
Leave a reply