ರಾಯಚೂರು.ನಗರದ ತಾಯಿ ಬಾಲಮಾರೆಮ್ಮ ದೇವಿಯ ರಥೋತ್ಸವ ಕಾರ್ಯಕ್ರಮ ನಿನ್ನೆ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅತ್ಯಂತ ಅದ್ದೂರಿ ನಡೆಯಿತು. ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ತಾಯಿ ಬಾಲ ಮಾರೆಮ್ಮ ದೇವಿಯ ರಥೋತ್ಸವ ಕಾರ್ಯಕ್ರಮದಲ್ಲಿ ನಗರ ಸುತ್ತಮುತ್ತ ಪ್ರದೇಶ ಜನರು ಬಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಥ ಎಳೆಯುವ ಕಾರ್ಯಕ್ರಮ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನೆರವೇರಿತು.ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ ಬೇವಿನ ಸೀರೆ ಸೇವೆ ಹೋಳಿಗೆ ನೈವೇಧ್ಯ ಸಮರ್ಪಿಸಿದ ಬಳಿಕ ದೇವಾಲಯದ ಮುಂಭಾಗದಲ್ಲಿ ಅಲಂಕರಿಸಲ್ಪಟ್ಟ ರಥದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.ಕುಣಿತ ಹಾಗೂ ವಿವಿಧ ವಾದ್ಯಗಳ ನಡುವೆ ಸಹಸ್ರಾರು ಭಕ್ತರು ಬೀದಿಯಲ್ಲಿ
ಪ್ರಾಂಗಣದಲ್ಲಿ ಸಾಗಿಬಂದ ದೇವಿಯ ರಥಕ್ಕೆ ಜಯಘೋಶ ಕೂಗಿ ದೇವಸ್ಥಾನದ ರಥವನ್ನು ಎಳೆದ ಭಕ್ತರು, ದೇವಿ ಕೃಪೆಗೆ ಪಾತ್ರರಾದರು.
ಸಂಜೆ ಭಜನೆ ಕಾರ್ಯಕ್ರಮ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಹಿಂದುಳಿದ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ,ಮಾಜಿ ಆರ್ ಡಿ ಎ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ಆರ್ ಡಿ ಎ ಮಾಜಿ ಅಧ್ಯಕ್ಷ ವೈ ಗೋಪಾಲರೆಡ್ಡಿ, ಕಡಗೋಳ್ ಆಂಜನೇಯ, ಕೆ. ಟಿ ನರಸಣ್ಣ, ಪಂಪಣ್ಣಗೌಡ ಪಾಟೀಲ್, ಬಡಾವಣೆಯ ನಿವಾಸಿಗಳು ಸೇರಿದಂತೆ ಸುತ್ತಮುತ್ತ ಪ್ರದೇಶ ಜನರು ಪಾಲ್ಗೊಂಡಿದ್ದರು.