ರಾಯಚೂರು. ಮಾನಸಿಕವಾಗಿ ಅಸ್ವಸ್ಥಗೊಂಡ ತಾಯಿ ತನ್ನ ಮಗಳನ್ನು ಸಾಯಿಸಿ ತಾನು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಮಸ್ಕಿ ತಾಲೂಕಿನ ದೋತರಬಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಸ್ವಸ್ಥಗೊಂಡ ಲಲಿತಾ ತನ್ನ ಮಗಳು ಶ್ರೀದೇವಿ (9) ವರ್ಷ ನೀರಿನ ಸಂಪಿಗೆ ಎಸೆದಿದ್ದಾಳೆ ನಂತರ ತಾನು ವಿಷ ಸೇವಿಸಿದ್ದಾಳೆ
ಹತ್ತಿರದ ನಿವಾಸಿಗಳು ಇದನ್ನು ಗಮನಿಸಿ ಅವರನ್ನು ಚಿಕಿತ್ಸೆಗಾಗಿ ಸಿಂಧನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.