ರಾಯಚೂರು,ಫೆ.೬- ಜಿಲ್ಲೆಯ ಮಾನವಿ ತಾಲೂಕಿನಮುದ್ದಂಗುಂಡಿ ಗ್ರಾಮದಲ್ಲಿ ಎರಡು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನೆಡೆಸಿದ ಘಟನೆ ವರದಿಯಾಗಿದೆ. ಗ್ರಾಮದಿಂದ ೨ ಕಿಮಿ ದೂರದಲ್ಲಿರುವ ಖಾಸಗಿ ಶಾಲೆಗೆ ಮಗು ಹೋಗಿತ್ತು.
ಸಂಜೆ ಶಾಲೆಯಿಂದ ಮನೆ ತೆರಳಲು ಪಾಲಕರನ್ನು ಕಾಯುತ್ತಿದ್ದ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗುವದಾಗಿ ಕರೆದುಕೊಂಡ ಹೋದ ಗ್ರಾಮದ ಶಿವನಗೌಡ ಎಂಬ ಯುವಕ ಕೃತ್ಯ ಎಸಗಿದ್ದು ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯನ್ನು ದಾರಿ ಮಧ್ಯೆ ಬಿಟ್ಟು ಹೋಗಿದ್ದ ಎನ್ನಲಾಗಿದೆ.ಮನೆಗೆ ಬಂದಾಗ ಬಾಲಕಿ ಅಸ್ವಸ್ಥಗೊಂಡಾಗ ಮಾನವಿ ತಾಲೂಕ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ರವಾನಿಸಲಾಗುತ್ತಿದೆ. ಬುಧವಾರ ಸಂಜೆ ಘಟನೆ ನಡೆದಿದೆ.ಸ್ಥಳಕ್ಕೆ ಎಸ್ಪಿ ಪುಟ್ಟಮಾದಯ್ಯ ಬೇಟಿ ನೀಡಿ ಪರಿಶೀಲಿಸಿ ಆರೋಪಿ ವಿರುದ್ದ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲು ಸೂಚಿಸಿದ್ದರು.ಮಾನವಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.