ಮಾನವಿ.ಮದುವೆ ನಿಶ್ಚಯವಾಗಿದ್ದ ಯುವತಿ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ದುರಂತ ಘಟನೆ ತಾಲೂಕಿನ ಪೆಚಲಬಂಡ ಕ್ಯಾಂಪ್ನಲ್ಲಿ ನಡೆದಿದೆ.
ಮೃತ ಯುವತಿ ಲಕ್ಷ್ಮಿ (19) ಎಂದು ಗುರುತಿಸಲಾ ಗಿದೆ. ಕುರಿ ಕಾಯಲು ಹೋಗಿದ್ದ ತೆರಳಿದ್ದು ಕೆರೆಯಲ್ಲಿ ನೀರು ಕುಡಿಯಲು ಇಳಿದಾಗ ಕಾಲು ಜಾರಿ ಬಿದ್ದಿದ್ದು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾಳೆ.
ಅಕ್ಕ-ತಂಗಿ ಇಬ್ಬರು ಕುರಿ ಕಾಯಲು ಕ್ಯಾಂಪ್ ಹೊರ ವಲಯಕ್ಕೆ ತೆರಳಿದ್ದು, ಅಕ್ಕ ಲಕ್ಷ್ಮಿಗೆ ಬಾಯಾರಿಕೆಯಾಗಿದ್ದು, ಪಕ್ಕದ ಜಮೀನಿನಲ್ಲಿದ್ದ ಕೆರೆಗೆ ನೀರು ಕುಡಿಯಲು ಹೋಗದಾಗ ಕಾಲು ಜಾರಿ ಬಿದ್ದು, ಮುಳುಗಿದ್ದಳು. ಸ್ಥಳೀಯರು ಯುವತಿಯನ್ನು ಕೆರೆಯಿಂದ ಮೇಲೆತ್ತಿ, ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮೃತಪಟ್ಟಿದ್ದಾಳೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಾನವಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಮಾನವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾನವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯುವತಿಗೆ ವಿವಾಹ ನಿಶ್ಚಯವಾಗಿದ್ದು, ಮುಂದಿನ ವಾರ ಮದುವೆ ನಿಶ್ಚಯವಾಗಿತ್ತು. ಹೊಸ ಜೀವನಕ್ಕೆ ಕಾಲಿಡುವ ಮುನ್ನವೇ ಯುವತಿ ದುರಂತ ಅಂತ್ಯ ಕಂಡಿದ್ದು, ಮೃತಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.