ಸಿಂಧನೂರು. ರಸ್ತೆಯ ನಿಯಮಗಳ ಪಾಲನೆ, ಹೆಲ್ಮೆಟ್‌ನ್ನು ಕಡ್ಡಾಯವಾಗಿ ಅಳವಡಿಕೆ ಹಾಗೂ ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸಿದಲ್ಲಿ ಅಪಘಾತಗಳು ಸಂಭವಿಸುತ್ತದೆ, ಇವುಗಳ ತಡೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ನಿಯಂತ್ರಣ ಮಾಡಬಹುದು ಎಂದು ಸಂಚಾರಿ ಪೊಲೀಸ್ ಠಾಣೆ ಠಾಣೆಯ ಪಿ ಎಸ್ ಐ ಶ್ರೀ ವೆಂಕಟೇಶ ಚವ್ಹಾಣ್ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ
ನೊಬೆಲ್ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ ಟ್ರಾಫಿಕ್ ಪೊಲೀಸ್ ಮ್ಯಾನೇಜ್ಮೆಂಟ್ ವಿಷಯದ ಕುರಿತು ಮಾತನಾಡಿದರು.
ಸಾರ್ವಜನಿಕರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು, ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ಮಧ್ಯ ಸೇವನೆ ಮಾಡಿ ವಾಹನ ಚಲಾಯಿಸಬಾರದು, 18 ವರ್ಷದೊಳಿಗಿನ ಮಕ್ಕಳ ಚಾಲನೆ ಮಾಡುವಂತಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳು ಕಾಲೇಜಿನ ಉಪನ್ಯಾಸಕರು ಹಾಗೂ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಹೊನ್ನಪ್ಪ ಬೆಳಗುರ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.