ರಾಯಚೂರು : ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದ್ದು, ರಾಜ್ಯದಲ್ಲಿ ಒಳ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಅಂಬಣ್ಣ ಅರೋಲಿಕರ್ ಅವರು ತೀರ್ಪನ್ನು ಸ್ವಾಗತಿಸಿದ್ದಾರೆ.
ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ರ ಪ್ರತಿಮಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದವರು ರಾಜ್ಯ ಸರ್ಕಾರ
ಸರ್ಕಾರಗಳು ಕಾಲಹರಣವನ್ನು ಮುಂದುವರಿಸದೆ, ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ದಮನಿತ ಸಮುದಾಯಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಇದು ಸುವರ್ಣಾವಕಾಶವಾಗಿದೆ.
ಸುಪ್ರೀಂ ಕೋರ್ಟಿನ ಒಳ ಮೀಸಲಾತಿ ಕುರಿತ ತೀರ್ಪು ಗೌರವಿಸಬೇಕಾದ ವಿಚಾರ. ಕಳೆದ ಮೂವತ್ತು ವರ್ಷಗಳಿಂದ ಈ ಬಗ್ಗೆ ಬೀದಿ ಹೋರಾಟ ಮಾಡಿದ್ದೇವೆ. 2020ರಲ್ಲಿ ಅರುಣ್ ಮಿಶ್ರಾ ಪೀಠದ ತೀರ್ಪು ಬಂದು, ಐದನೇ ಬೆಂಚ್‌ನಿಂದ ಏಳನೇ ಬೆಂಚಿಗೆ ಪ್ರಕರಣ ವರ್ಗಾವಣೆಯಾದ ನಂತರ ಏನಾಗುತ್ತದೋ ಎಂಬ ಬಗ್ಗೆ ಬಹಳ ಆತಂಕವಿತ್ತು. ಈಗ ಬಂದಿರುವ ತೀರ್ಪನ್ನು ನಾವು ಸ್ವಾಗತ್ತಿಸುತ್ತೇವೆ” ಎಂದು ಸಂತಸ ವ್ಯಕ್ತಪಡಿಸಿದರು.
“ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾಲಹರಣ ಮಾಡದೆ, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ಕೊಟ್ಟಿರುವ ಪರಮಾಧಿಕಾರವನ್ನು ಬಳಸಿಕೊಳ್ಳುವ ಮೂಲಕ ಕೂಡಲೇ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಯುದ್ದೋಪಾದಿಯಲ್ಲಿ ಮಾಡಬೇಕು. ಕಳೆದ 75 ವರ್ಷಗಳಿಂದ ಅಸ್ಪೃಶ್ಯ ಸಮುದಾಯಗಳಿಗೆ ವಿದ್ಯೆ, ಉದ್ಯೋಗದಲ್ಲಿ ಸಾಕಷ್ಟು ನಷ್ಟವಾಗಿದೆ. ಹಾಗಾಗಿ, ಕಾಲಹರಣ ಮುಂದುವರಿಸದೆ ಸರ್ಕಾರಗಳು ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದುಪಡಿ ಮಾಡಿಕೊಳ್ಳಬೇಕು. ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಇದು ಸುವರ್ಣಾವಕಾಶವಾಗಿದೆ; ಅದನ್ನು ಸರ್ಕಾರಗಳು ಕೂಡಲೇ ಮಾಡಬೇಕು” ಎಂದು ಅವರು ಒತ್ತಾಯಿಸಿದರು.