ರಾಯಚೂರು. ಬೆಳಕಿನ ಹಬ್ಬ ದೀಪಾವಳಿಗೆ ಸರ್ಕಾರ ಕತ್ತಲೆ ಭಾಗ್ಯ ಕೊಟ್ಟಂತಾಗಿದೆ, ರಾಜ್ಯ ದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳದ ಮಧ್ಯೆಯೂ ಕೊರತೆ ಎದುರಾಗುವ ಭೀತಿ ಉಂಟಾಗಿದೆ.
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಇಳಕೆ ಕಂಡು ಬಂದಿದೆ. ಬೇಡಿಕೆ ಹೆಚ್ಚಾಗಿರುವ ಸಂದರ್ಭದಲ್ಲಿಯೂ ವಿದ್ಯುತ್ ಉತ್ಪಾದನೆ ಕುಸಿಯದಿಂದ ಈ ಬಾರಿ ದೀಪಾವಳಿ ಬೆಳಕಿನ ಹಬ್ಬವಾಗದೆ ಕತ್ತಲೆಯ ಹಬ್ಬವಾಗುತ್ತಿದೆ.
ರಾಜ್ಯದ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಿದ್ದರೂ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಕುಸಿತವಾಗಿರುವ ಕಾರಣ ದೀಪಾವಳಿ ಸಂದರ್ಭ ವಿದ್ಯುತ್ ಕಡಿತ ಉಂಟು ಮಾಡಬೇಕಾದ ಅನಿ ವಾರ್ಯತೆ ಸರ್ಕಾರಕ್ಕೆ ಎದುರಾಗಿದೆ.
ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 8 ಘಟಕಗಳಲ್ಲಿ ಕೇವಲ 2 ಘಟಕಗಳು ವಿದ್ಯುತ್ ಉತ್ಪಾದನೆ ಮಾಡುತ್ತಿವೆ, ಒಟ್ಟು 8 ಘಟಕಗಳಿಂದ 1,720 ಮೆ.ವಾ ವಿದ್ಯುತ್ ಸಾಮರ್ಥ್ಯದಲ್ಲಿ, ಇದೀಗ ಕೇವಲ 274 ಮೆ.ವಾ ಉತ್ಪಾದನೆ ಮಾಡುತ್ತಿದೆ.
ಇತ್ತು 1,600 ಮೆ.ವಾ ಸಾಮರ್ಥ್ಯದ ಯರಮರ ಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 2 ಘಟಕಗ ಳಲ್ಲಿ 1 ಮಾತ್ರ 302 ಮೆ.ವಾ ವಿದ್ಯುತ್ ಉತ್ಪಾದ ನೆಯಾಗುತ್ತಿದೆ. ರಾಯಚೂರು ಮತ್ತು ಯರಮ ರಸ್ ಶಾಖೋ ತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದ ನೆಗೆ ಬೇಕಾಗಿರುವ ಕಲ್ಲಿದ್ದಲು ದಾಸ್ತಾನು ಕಡಿಮೆ ಯಾಗಿರುವುದರಿಂದ ಘಟಕ ಗಳನ್ನು ಸ್ಥಗಿತಗೊಳಿಸಲಾಗಿದೆ.
ಆರ್ಟಿಪಿಎಸ್ನ 1 ಮತ್ತು 2 ಘಟಕಗಳನ್ನು ಕಲ್ಲಿದ್ದಲು ಸಂರಕ್ಷಣೆ ಕಾರಣಕ್ಕೆ ಸ್ಥಗಿತಗೊಂಡರೆ, 6ನೇ ಘಟಕ ಬೇಡಿಕೆ ಕಡಿಮೆ ಇದೆ ಎನ್ನುವ ನೆಪ ದಲ್ಲಿ ಸ್ಥಗಿತಗೊಳಿಸಲಾಗಿದೆ. ಇದೀಗ ಆರ್ಟಿಪಿಎಸ್ನಲ್ಲಿ ಕೇವಲ 30 ಸಾವಿರ ಮೆಟ್ರಿಕ್ ಟನ್, ವೈಟಿಪಿಎಸ್ನಲ್ಲಿ 1.30 ಲಕ್ಷ ಮೆಟ್ರಿಕ್ ಟನ್ ಕಲಿದ್ದಲು ದಾಸ್ತಾನು ಇದ್ದು, ಕಲ್ಲಿದ್ದಲು ಗಣಿಗಳಿಂದ ನಿಗದಿಯಂತೆ ಸರಬರಾಜು ಆಗಬೇ ಕಾದ ಕಲ್ಲಿದ್ದಲು ಶಾಖೋತ್ಪನ್ನ ಕೇಂದ್ರಗಳಿಗೆ ಸರಬರಾಜು ಆಗದೇ ಇರುವುದರಿಂದ ದಾಸ್ತಾನು ಪ್ರಮಾಣದಲ್ಲಿ ಇಳಿಕೆಯುಂಟಾಗಿದೆ.
ಒಟ್ಟಾರೆಯಾಗಿ ಬೇಡಿಕೆ ಇದ್ದರೂ ಉತ್ಪಾದನೆ ಕುಸಿತದಿಂದ ದೀಪಾವಳಿ ಬೆಳಕಿನ ಹಬ್ಬಕ್ಕೆ ಸರ್ಕಾರ ಕತ್ತಲೆ ಭಾಗ್ಯ ಕೊಟ್ಟಂತಾಗಿದೆ.