ರಾಯಚೂರು. ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ವೇದಿಕೆಯಲ್ಲಿರುವ ನೀರಿನ ಕ್ಯಾನ್, ಎಪ್ಲೈಫೆಯರ್, ಹಾಗೂ ಇನ್ನಿತರ ವಸ್ತುಗಳ ಕಳ್ಳತನ ನಡೆದಿದ್ದು, ಈ ಬಗ್ಗೆ ದೂರು ನೀಡಿದರೂ ಪೋಲಿಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಏಮ್ಸ್ ಹೋರಾಟ ಸಮಿತಿಯ ಮುಖಂಡ ಅಶೋಕ್ ಕುಮಾರ್ ಸಿಕೆ ಜೈನ್ ಆರೋಪಿಸಿದರು.
ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಗಾಂಧಿಜೀ ಪುತ್ಥಳಿ ಮುಂಭಾಗದಲ್ಲಿ ಏಮ್ಸ್ ಹೋರಾಟ ಸಮಿತಿಯಿಂದ ಕಳೆದ 2 ವರ್ಷಗ ಳಿಂದ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಹೋರಾಟ ಮುಂದುವರೆದುಕೊಂಡು ಬಂದಿದೆ.
ಏಮ್ಸ್ ಹೋರಾಟದ ವೇದಿಕೆಯಲ್ಲಿ ಉಪವಾಸ ಸತ್ಯಾಗ್ರಹ, ಸೇರಿದಂತೆ ವಿವಿಧ ರೀತಿಯ ಹೋರಾಟ ಮಾಡಲಾಗಿದೆ, ಉಪವಾಸ ಸತ್ಯಾಗ್ರಹದ ಹೋರಾಟ ಸಂದರ್ಭದಲ್ಲಿ ರಾತ್ರಿ ಸಮಯದಲ್ಲಿ ವೇದಿಕೆಯಲ್ಲಿಯೇ ನಿದ್ರಿಸುತ್ತಿದ್ದೆವು. ಆ ವೇಳೆ ಪೋಲಿಸರು ಸಹ ಜೊತೆಗೆ ಇರುತ್ತಿದ್ದರು.
ಹೋರಾಟದ ವೇದಿಕೆಯಲ್ಲಿ ಕುಳಿತುಕೊಳ್ಳುವ ಕುರ್ಚಿಗಳು, ಕುಡಿಯುವ ನೀರನ ಕ್ಯಾನ್ ಮತ್ತು ಎಪ್ಲೈಫೆಯರ್ ಜೊತೆಗೆ ಮಲಗುವ ಗಾದಿಯೂ ಕಳ್ಳತವಾಗಿದೆ.
ಮೊದಲಿಗೆ ಕುಡಿಯುವ ನೀರಿನ ಕ್ಯಾನ್, ಕುರ್ಚಿ ಕಳ್ಳತನವಾಗಿದೆ,ಮೌಕಿಕವಾಗಿ ಪಶ್ಚಿಮ ಪೋಲಿಸ್ ಠಾಣೆಯ ಐಪಿಎಸ್ ಅವರಿಗೆ ಮಾಹಿತಿ ನೀಡಲಾಯಿತು, ಸರತಿ ಉಪವಾಸ ಸತ್ಯಾಗ್ರಹ ವೇಳೆ ಇಲ್ಲಿಯೇ ಮಲಗುತ್ತಿದ್ದೇವು. ಉಪವಾಸ ಸತ್ಯಾಗ್ರಹ ಬಳಿಕ ಇಲ್ಲಿ ಯಾರು ಇರಲಿಲ್ಲ, ನಂತರ
ಕುರ್ಚಿಗಳು, 40 ಸಾವಿರ ಮೌಲ್ಯದ ಎಪ್ಲೈಫೆಯರ್‌ಗೆ ಚೈನ್ ಹಾಕಿ ಕೀಲಿ ವ್ಯವಸ್ಥೆ ಮಾಡಲಾಗಿತ್ತು, ಅದೂ ಸಹ ಕಳ್ಳತನವಾಗಿದೆ, ಜೊತೆಗೆ ಬಾರಿಸುವ ಹಲಗೆ ಕಳ್ಳತನ ಮಾಡಲಾಗಿದೆ.
ಹೋರಾಟದ ವೇದಿಕೆಯಲ್ಲಿ ಕಳ್ಳತನ ವಾದ ಕುರಿತು ಪೋಲಿಸ್ ಠಾಣೆಗೆ ಲಿಖಿತ ದೂರು ನೀಡಲಾಗಿದೆ. ಚುನಾವಣೆ ವೇಳೆ ವೇದಿಕೆಗೆ ಬಂದು ಪೋಲಿಸರು ರಾಜಕೀಯ ವ್ಯಕ್ತಿಗಳು ಬರುತ್ತಿದ್ದು ಸಹಕರಿಸಿ ಎಂದು ತಿಳಿಸಿದ್ದರು, ನಾವು ಸಹ ಸಹಕಾರ ನೀಡಿದ್ದೇವೆ.
ಕಳ್ಳತನವಾಗಿರುವ ಕುರಿತು ಸಂಶಯಾಸ್ಪದ ವ್ಯಕ್ತಿ ಬಗ್ಗೆ ಮಾಹಿತಿ ನೀಡಿದ್ದೇವೆ, ಆದರೂ ದೂರಿಗೆ ಸ್ಪಂದನೆ ಇಲ್ಲ ಎಂದು ಆರೋಪಿಸಿದರು.
ಹೋರಾಟದ ವೇದಿಕೆ ಹತ್ತಿರವೇ ಸಂಚಾರಿ ಪೋಲಿಸ್ ಠಾಣೆ, ವಸತಿ ಗೃಹ, ವೃತ್ತ ನಿರೀಕ್ಷರ ಕಚೇರಿ ಇದೆ, ಆದರೂ ಕಳ್ಳತನವಾಗಿದೆ, ಇನ್ನು ನಗರದಲ್ಲಿ ಸಾಮನ್ಯರ ಗತಿ ಏನು ಎಂದು ಪ್ರಶ್ನಿಸಿದರು.
ವೇದಿಕೆಯಲ್ಲಿ ಕಳ್ಳತನವಾಗಿರುವ ವಸ್ತುಗಳನ್ನು ಹುಡುಕಿಕೊಡಬೇಕು ಎಂದು ಒತ್ತಾಯಿಸಿದರು.