ರಾಯಚೂರು. ನಗರದ ತೀನ್ ಕಂದಿಲ್ ಸರ್ಕಲ್ ಹತ್ತಿರ ಇರುವ ಹಜರತ್ ಸೈಯದ್ ಶಹಾ ಅಲ್ಲಾ ವುದ್ದೀನ್ ಬರ್ಗಾದ ಬಳಿ ಕಮಲ್ ನಿರ್ಮಿಸಲಾ ಗುತ್ತಿದೆ, ಪುರಾತನ ಕೋಟೆ ಜಾಗದಲ್ಲಿನ ಕಮಾ ನು ತೇರುವು ಮಾಡಲು ನಗರಸಭೆಗೆ ಪುರಾತತ್ವ ಇಲಾಖೆ ಆದೇಶ ನೀಡಿದೆ. ಪುರಾತತ್ವದ ಸ್ಥಳಗಳು ಅವಶೇಷಗಳ ಕಾಯ್ದೆ 100 ಮೀಟರ್ ವ್ಯಾಪ್ತಿ ಯಲ್ಲಿ ಕಾಮಗಾರಿಗಳಿಗೆ ನಿಷೇಧವಿದೆ ಆದರೂ ಕಾಮಗಾರಿ ಮಾಡಿದ್ದು ತೆರವಿಗೆ ಆದೇಶ ನೀಡಲಾಗಿದೆ.
ದರ್ಗಾದ ಎದುರು ಪುರಾತನ ಕೋಟೆ ಜಾಗದಲ್ಲಿ ಕಮಲ್ ನಿರ್ಮಾಣ ವಿವಾದ ಬೆನ್ನೆಲ್ಲೆ ರಾಯ ಚೂರಿನ ವಿವಾದಿತ ಸ್ಥಳಕ್ಕೆ ಕಲಬುರ್ಗಿಯ ವಲಯ ಪುರಾತತ್ವ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು, ಪರಿಶೀಲನೆ ಬಳಿಕ ಕಮಾನ್ ತೆರವಿಗೆ ಆದೇಶ ಹೊರಡಿಸ ಲಾಗಿದೆ.
ಕಮಾನ್ ರಾಜ್ಯ ಸಂರಕ್ಷಿತ ಕಾಟೆ ದರ್ವಾಜ್ ಸ್ಮಾರಕದ ಬಳಿ ಇದೆ ಕಾಮಗಾರಿ ನಡೆದ ಸ್ಥಳವು ಕೋಟೆಯ ಸ್ಥಳವಾಗಿದೆ, ಸುರಕ್ಷಿತ ಸ್ಮಾರಕದ 100 ಮೀಟರ್ ನಿಷೇಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ, ನೂತನ ಕಮಾನ್ ಕಟ್ಟಡ ಕಾಮಗಾರಿ ಕಾನೂನು ಬಾಹಿರ ಮತ್ತು ನಿಷೇಧ, ಈ ಹಿನ್ನೆಲೆಯಲ್ಲಿ ನಗರಸಭೆ ಕೂಡಲೇ ಕಮಾನ್ ಕಾಮಗಾರಿ ಸ್ಥಗಿತಗೊಳಿಸಬೇಕು, ಅನಧಿಕೃತ ಕಟ್ಟಡ ಕಾಮಗಾರಿ ತೆರವಿಗೆ ಕ್ಯೂರೇಟರ್ ಗೆ ಕಲಬುರ್ಗಿ ವಲಯದ ಪುರಾತತ್ವ ಇಲಾಖೆ ಪತ್ರ ಬರೆದು ತಿಳಿಸಿದೆ.