ರಾಯಚೂರು- ಧರ್ವೇಶ ಗ್ರೂಪ್ ಹಣ ಹೂಡಲು ಜನರಿಂದ ಹಣ ತೊಡಗಿಸಲು ಏಜೆಂಟ್ ರಾಗಿ ಕಾರ್ಯನಿರ್ವಹಿಸಿದ್ದ ಇಬ್ಬರು ಏಜೆಂಟರನ್ನು ಬಂಧಿಸಿದ ಸಿಐಡಿ ತಂಡ ಎರಡನೇ ಹೆಚ್ಚುವರಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.
ನಗರದ ಎಲ್ಬಿಎಸ್ ನಗರದ ನಿವಾಸಿಗಳಾದ ಡಾ.ವಾಸಿಂ ಮತ್ತು ಅಖಿಲ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಬಂಧಿತರು ಧರ್ವೇಶ ಗ್ರೂಪ್ನಲ್ಲಿ ಹಣ ತೊಡಗಿಸಿಲು ಸಹಕರಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಹಣ ಹೂಡಿರುವ ಜನರು ಸಿಐಡಿ ತಂಡಕ್ಜೆ ವಂಚನೆಯ ಕುರಿತು ಮಾಹಿತಿ ನೀಡಿದ್ದಾರೆ.ಬಂಧಿತರ ಸಂಖ್ಯೆ ಐದಕ್ಜೆ ಏರಿದೆ. ಮೂಲ ಆರೋಪಿ ಮಹ್ಮದ ಸೂಜಾ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ಹೇಳಲಾಗಿದೆ.