ರಾಯಚೂರು:ಭಾರತ ಚುನಾವಣಾ ಆಯೋಗವು ಮಾ.16 ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಧಿಸೂಚನೆ ಹೊರಡಿಸಿದ್ದು, 06-ರಾಯಚೂರು (ಪ.ಪಂ) ಲೋಕಸಭಾ ಚುನಾವಣೆ- 2024 ರ ಸಾಮಾನ್ಯ ವೀಕ್ಷಕರಾಗಿ ಅಜಯ್ ಪ್ರಕಾಶ ಅವರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರು, ರಾಯಚೂರು ಜಿಲ್ಲಾ ಕೇಂದ್ರಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಲಭ್ಯವಿರುತ್ತಾರೆ. ಇವರನ್ನು ರಾಯಚೂರು ನಗರದ ಯರಮರಸ್ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10:00 ರಿಂದ 11:00 ಗಂಟೆಯವರೆಗೆ ಸಾರ್ವಜನಿಕರು ಭೇಟಿ ಮಾಡಿ ಅಥವಾ ಮೊ.ಸಂ: 7411704584 ಸಂಖ್ಯೆಗೆ ಸಂಪರ್ಕಿಸಿ ಲೋಕಸಭಾ ಚುನಾವಣೆ ಸಂಬಂಧಿಸಿದ ಅಹವಾಲು, ಮಾಹಿತಿಯನ್ನು ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.