ರಾಯಚೂರು: ನಗರದ ಲೋಕಸಭಾ ಕ್ಷೇತ್ರದ ಸಂಸದರ ಕಾರ್ಯದಲ್ಲಿ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರ ಸಂಸದರಾದ ಜಿ ಕುಮಾರ ನಾಯಕ, ನಬಾರ್ಡ್ ಸಂಸ್ಥೆ ನೀಡುವ ಸಾಲದ ಪ್ರಮಾಣವನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಇಂದು RDCC ಬ್ಯಾಂಕ್ ನಿರ್ದೇಶಕರು ಹಾಗೂ ನಬಾರ್ಡ್ ನಿಂದ ರಾಜ್ಯದಲ್ಲಿ ಸಾಲ ನೀಡುತ್ತಿರುವ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
ರೈತರಿಗೆ ದೊರೆಯುತ್ತಿರುವ ಸಾಲದ ಪ್ರಮಾಣ ಹಾಗೂ ರಾಯಚೂರು ಜಿಲ್ಲೆಯಲ್ಲಿ ಶೇಕಡವಾರು ಎಷ್ಟು ಪ್ರಮಾಣದ ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿದೆ ಅಲ್ಲದೆ ರೈತರಿಗೆ ಸರಿಯಾದಂತಹ ದಾಖಲೆಗಳ ಕುರಿತು ತಾವು ಮಾಹಿತಿ ನೀಡಿ ರೈತರ ಆರ್ಥಿಕತೆಗೆ ತಾವು ಸಹಕರಿಸಬೇಕು ಎಂದು ಅಧಿಕಾರಿಗಳೊಂದಿಗೆ ಚರ್ಚಿಸಿ ನಬಾರ್ಡ್ ಸಂಸ್ಥೆಯಿಂದ ದೊರೆಯುವಂತ ಸಾಲ ಸೌಲಭ್ಯಗಳನ್ನು ಕಾಲಮಿತಿಯೊಳಗೆ ನೀಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಆರ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ್, ಎಂಡಿ ಮಲ್ಲಿಕಾರ್ಜುನ ಪೂಜಾರ್, ಕೆನರಾ ಬ್ಯಾಂಕ್ ಎಲ್ಡಿಎಂ ಎಂ.ಮಾದುರಿ ಸೇರಿದಂತೆ ಇತರರಿದ್ದರು.