ರಾಯಚೂರು: ಹೊಸ ವರ್ಷದ ದಿನದಂದೇ ರಾಯಚೂರಿನಲ್ಲಿ ಬಾಣಂತಿ ಸಾವನಪ್ಪಿದ್ದು, ನವಜಾತ ಶಿಶು ಜೊತೆ ತಾಯಿ ಕೂಡ ಸಾವನಪ್ಪಿರುವ ಘಟನೆ ಬುಧವಾರ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ದೇವದುರ್ಗ ತಾಲೂಕಿನ ಮಸೀದಾಪುರ ಗ್ರಾಮದ ಶಿವಲಿಂಗಮ್ಮ(21) ಮೃತ ಬಾಣಂತಿ, ಡಿ.27ರಂದು ಸಿಸೆರಿನ್ ಮೂಲಕ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಹೆರಿಗೆ ಬಳಿಕ ರಕ್ತದೊತ್ತಡ(ಬಿಪಿ) ಹೆಚ್ಚಾಗಿದ್ದರಿಂದ ನಾಲ್ಕು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ತಡರಾತ್ರಿ 2 ಗಂಟೆಗೆ ಮಗು ಸಾವನಪ್ಪಿದ್ದು, ಬೆಳಗಿನಜಾವ 5 ಗಂಟೆಗೆ ತಾಯಿ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದಲೇ ಶಿವಲಿಂಗಮ್ಮ ಸಾವನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್ ನಿಂದ ಈ ವರೆಗೆ ಮೃತ ಪಟ್ಟ ಬಾಣಂತಿಯರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.