Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ಕಾಂಗ್ರೆಸ್‌ ಗೆ ಚೆಂಬು ಗ್ಯಾರೆಂಟಿ – ಬಸವನಗೌಡ ಯತ್ನಾಳ್‌

ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ಕಾಂಗ್ರೆಸ್‌ ಗೆ ಚೆಂಬು ಗ್ಯಾರೆಂಟಿ – ಬಸವನಗೌಡ ಯತ್ನಾಳ್‌

ಲಿಂಗಸೂಗೂರು : ದೇಶಕ್ಕೇ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌ ಸರಕಾರ ಈ ಬಾರಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾದರೆ ಕಾಂಗ್ರೆಸ್ ಕೈಗೆ ಗ್ಯಾರೆಂಟಿಯಾಗಿ ಚೆಂಬು ಸಿಗಲಿದೆ ಎಂಬುದು ನಿಕ್ಕಿಯಾಗಿದೆ ಎಂದು ಬಸವನಗೌಡ ಯತ್ನಾಳ್ ತಿಳಿಸಿದರು.

ಲಿಂಗಸೂಗೂರು ಪಟ್ಟಣದಲ್ಲಿಂದು ಹಮ್ಮಿಕೊಂಡಿರುವ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದಾಗ ಚೆಂಬು ಪ್ರದರ್ಶನ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದವರು, ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಎಲ್ಲಿತ್ತು? ಈಗಿನ ಮೋದಿ ಆಡಳಿತದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿದೆ.
ಈ ಹಿಂದೆ ಕೊತ್ವಾಲ್‌ ರಾಮಚಂದ್ರಗೆ ಸಿಗರೇಟ್‌ ತಂದು ಕೊಡುತ್ತಿದ್ದವರಿಗೆ ಸಾವಿರ ಕೋಟಿ ರುಪಾಯಿ ಎಲ್ಲಿಂದ ಬಂತು ? ಇಂತವರ ಬಳಿ ಇಷ್ಟು ಹಣ ಹೇಗೆ ಬಂತು ಎಂದು ಉತ್ತರಿಸಲಿ. ಈ ದೇಶ ಲೂಟಿ ಮಾಡಿದ್ದೇ ಕಾಂಗ್ರೆಸ್‌ ನಾಯಕರು, ಪಿಎಫ್‌ಐ, ಎಸ್‌ಡಿಪಿಐ ಭಾರತವನ್ನು ಇಸ್ಲಾಮಿಕ್‌ ರಾಷ್ಟ್ರ ಮಾಡುವ ಪಣ ತೊಟ್ಟಿದೆ. ಕೆಲವು ಪ್ರಕರಣಗಳು ಹೊರ ಬರುತ್ತಿವೆ. ದೇಶ ಹಿಂದೂ ರಾಷ್ಟ್ರ ಆಗಿ ಸನಾತನ ಧರ್ಮ ಆಗಬೇಕಾದರೆ ಮೋದಿಗೆ ಮತ ಹಾಕಿ. ಹಿಂದೂಗಳು ಸುರಕ್ಷಿತವಾಗಿ ಇರಬೇಕು ಎಂದರೆ ಬಿಜೆಪಿಗೆ ಮತ ಹಾಕಿ ಎಂದು ಯತ್ನಾಳ್ ಮನವಿ ಮಾಡಿದರು.
ಪಿಎಫ್‌ಐ, ಎಸ್‌ಡಿಪಿಐ ಅವರಿಗೆ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡುವ ಟಾರ್ಗೆಟ್ ಇದೆ. 2047ರ ಒಳಗಡೆ ಭಾರತವನ್ನ ಇಸ್ಲಾಂಮೀಕರಣ ಮಾಡಲು ಲವ್ ಜಿಹಾದ್ ನಡೆಯುತ್ತಿದೆ ಎಂದು ಯತ್ನಾಳ್ ಹೇಳಿದರು. ಪಿಎಫ್ಐ, ಎಸ್‌ಡಿಪಿಐ ಟಾರ್ಗೆಟ್ ಭಾರತವನ್ನು ಇಸ್ಲಾಮೀಕರಣಗೊಳಿಸುವುದು. ಕೆಲವೊಂದು ಘಟನೆಗಳು ಹೊರಗಡೆ ಬರುತ್ತಿವೆ, ಕೆಲವರು ಮರ್ಯಾದೆಗೆ ಅಂಜಿ ಸುಮ್ಮನಿದ್ದಾರೆ. ನೀವು ದೇಶದಲ್ಲಿ ಸುರಕ್ಷಿತವಾಗಿರಬೇಕಾದ್ರೆ, ಸನಾತನ ಧರ್ಮ ಉಳಿಯಬೇಕಾದ್ರೆ ಮೋದಿ ಅವರಿಗೆ ಆಶೀರ್ವಾದ ಮಾಡಿ. ನಿಮ್ಮ ಸುರಕ್ಷತೆಗೆ ನೀವು ಚಾಕು , ಚೂರಿ ತೊಗೊಂಡು ಹೋರಾಟ ಮಾಡೋದು ಬೇಡ. ನೀವು ಮತಗಟ್ಟೆಗೆ ಬಂದು ಮತ ಮಾಡಿದ್ರೆ ಸಾಕು ಎಂದು ಯತ್ನಾಳ್ ಹೇಳಿದರು.
ಕಾಂಗ್ರೆಸ್‌ನವರು ಮುಸ್ಲಿಂ ರಕ್ಷಕರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಾಕಿಸ್ತಾನ ಧ್ವಜ ಹಾರಿಸ್ತಾರೆ, ಜೈ ಶ್ರೀರಾಮ ಅಂದ್ರೆ, ಅಲ್ಲಾ ಹೂ ಅಕ್ಬರ್ ಅನ್ನಬೇಕು ಅಂತಾರೆ. ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಆಗುತ್ತಿಲ್ಲ. ಕಾಂಗ್ರೆಸ್‌ನವರು ಗ್ಯಾರಂಟಿಗಳಿಂದ ಜನ ವೋಟ್ ಹಾಕ್ತಾರೆ ಅಂದುಕೊಂಡಿದ್ದಾರೆ. ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ನಡೆದಿದೆ‌. ಇಂತಹ ಘಟನೆ ನಡೆದಾಗ ಗೃಹ ಸಚಿವರು ಹಗುರವಾಗಿ ಮಾತಾಡ್ತಾರೆ. ಕಾಂಗ್ರೆಸ್ ಮಂತ್ರಿಗಳಿಗೆ ತಾಳ ಇಲ್ಲದಂತಾಗಿದೆ ಎಂದು ಯತ್ನಾಳ್ ಆಕ್ರೋಶ ಹೊರ ಹಾಕಿದರು.
ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿ ಪುಟದಲ್ಲೂ ಭಾರತವನ್ನು ಒಡೆಯುವ ಪ್ರಯತ್ನಗಳನ್ನು ಮಾಡಲಾಗಿದೆ. ಸ್ವಾತಂತ್ರ್ಯದ ಮೊದಲು ಮುಸ್ಲಿಂ ಲೀಗ್ ಹೊಂದಿದ್ದ ಆಲೋಚನೆಗಳಂತೆ ಅವರ ಪ್ರಣಾಳಿಕೆ ಇದೆ. ಇಂದಿನ ಭಾರತದ ಬಗ್ಗೆ ಆ ಯುಗದ ಆಲೋಚನೆಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದು ಈಗಾಗಿ ನರೇಂದ್ರ ಮೋದಿಜಿಯವರನ್ನು ಪ್ರಧಾನಿ ಮಾಡಲು 2 ಲಕ್ಷ ಅಂತರದಿಂದ ಅಮರೇಶ್ವರ ನಾಯಕರನ್ನು ಗೆಲ್ಲಿಸಿ ಕಳಿಸಬೇಕು ಎಂದರು.
ಮುಂದಿನ ದಿನಗಳಲ್ಲಿ ಬಿ ವಿ ನಾಯಕರಿಗೆ ಪಕ್ಷದಿಂದ ಸೂಕ್ತ ಸ್ಥಾನ ಸಿಗುವ ಮೂಲಕ ಅವರು ಕೂಡ ವಿಧಾನಸಭೆಗೆ ಬರುವುದರಲ್ಲಿ ಅನುಮಾನವೇ ಇಲ್ಲ ಈಗಾಗಿ ಇದು ದೇಶದ ಚುನಾವಣೆ ನಮ್ಮಲ್ಲಿನ ಗೊಂದಲಗಳಿಗೆ ದೇಶ ಬಲಿಯಾಗಬಾರದು ಎಂದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ್ , ಜಿಲ್ಲಾಧ್ಯಕ್ಷರಾದ ಶಾಸಕರಾದ ಶಿವರಾಜ್ ಪಾಟೀಲ್ , ಶಾಸಕರಾದ ಮಾನಪ್ಪ ಡಿ ವಜ್ಜಲ್ , ಮಾಜಿ ಸಂಸದರಾದ ಬಿ.ವಿ ನಾಯಕ್ ,ಉಸ್ತುವಾರಿಗಳಾದ ಕೆ.ಎಂ ಪಾಟೀಲ್ , ಆರ್.ರುದ್ರಯ್ಯ, ರಾಜಾ ಶ್ರೀನಿವಾಸ ನಾಯಕ್ , ರಾಜಾ ಸೋಮನಾಥನಾಯಕ್ , ಅಯ್ಯಪ್ಪ ಮಾಳೂರು , ಹುಲ್ಲೇಶ್ ಸಾಹುಕಾರ್, ಬಾಬಣ್ಣ ಅನ್ವರಿ ಸೇರಿದಂತೆ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು

Megha News