ರಾಯಚೂರು. ಅತೀ ಸೂಕ್ಷ್ಮವಾದ ವಿಷಯಗಳ ಬಗ್ಗೆ ಮಾತನಾಡಬಾರದೆಂದು ಕೆಪಿಸಿಸಿಯ ಸೂಚ ನೆಯ ನಡುವೆಯೂ ಚುನಾವಣೆ ಸಂದರ್ಭದಲ್ಲಿ ಪಕ್ಷ ಮತ್ತು ಪಕ್ಷದ ನಾಯಕರುಗಳು ಮುಜುಗರ ವಾಗುವಂತಹ ಹೇಳಿಕೆಗಳನ್ನು ನೀಡಿರುವ ವಿಡಿ ಯೋಗಳು ಮಾದ್ಯಮಗಳಲ್ಲಿ ಹರಿದಾಡತ್ತಿದ್ದು ತಮ್ಮ ಇಂತಹ ಅನಗತ್ಯ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದ್ದು ಈ ಕಾರಣಕ್ಕಾಗಿ ತಮ್ಮನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತ್ತು ಮಾಡಲಾಗಿದೆ.
ತಾವು 7 ದಿನಗಳೊಳಗಾಗಿ ನೀಡಿರುವ ಹೇಳಿಕೆ ಯ ವಿಡಿಯೋ ಬಗ್ಗೆ ತಮ್ಮ ವಿವರಣೆಯನ್ನು ಕೆಪಿಸಿಸಿ ಕಳುಹಿಸಿಕೊಡಬೇಕು, ತಪ್ಪಿದ್ದಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಅವರು ತಿಳಿಸಿದ್ದಾರೆ.