ರಾಯಚೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲು ಪಕ್ಷದ ಜಿಲ್ಲಾಧ್ಯಕ್ಷನಾಗಿ ಹಾಗೂ ಎಲ್ಲಾ ಪಕ್ಷದ ಮುಖಂಡರು, ಹಿರಿಯರು ಕಾರ್ಯಕರ್ತರೊಂದಿಗೆ ಒಟ್ಟಾಗಿ ಶ್ರಮಿಸುವುದಾಗಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೇಳಿದರು.
ತಮ್ಮ ನಿವಾಸದಲ್ಲಿ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯ ಘಟಕದಿಂದ ನನ್ನ ಮೇಲೆ ಭರವಸೆ ಇಟ್ಟು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಜಿಲೆಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯ ರಾಜಕಾರಣಿಗಳು, ಜಿಲ್ಲೆಯ ಮಾಜಿ ಶಾಸಕರುಗಳು, ಹಿರಿಯ ಮುಖಂಡರುಗಳನ್ನು ಗುರುತಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ಭಾವುಟವನ್ನು ಜಿಲ್ಲೆಯಲ್ಲಿ ಹಾರಿಸಲಾಗುವುದು ಎಂದು ತಿಳಿಸಿದರು.
ಜನವರಿ 22ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ತಮ್ಮ ಸುತ್ತ ಮುತ್ತಲಿನ ದೇಸ್ಥನಗಳನ್ನು ಸ್ವಚ್ಛಗೊಳಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ್, ಕಡಗೋಲ ಆಂಜನಯ್ಯ, ಸುಭಾಸ್ ಆಸ್ಕಿಹಾಳ್, ಭೀಮಯ್ಯ ಮಂಚಲ್, ತಿಮ್ಮಪ್ಪ ಪಿರಂಗಿ, ಎನ್. ಕೆ.ನಾಗರಾಜ, ಆರ್. ಆಂಜಿನೇಯ್ಯ, ಚಂದ್ರು ಭಂಡಾರಿ, ಜೆ. ಎಮ್. ಮೌನೇಶ್, ಸಂಗಮೇಶ ಕಲ್ಮಲ, ಎಸ್. ಹುಲಿಗೆಪ್ಪ, ಎಸ್. ವೆಂಕಟೇಶ್, ರಮೇಶ್ ರೆಡ್ಡಿ, ಪಿ. ಮುನಿಸ್ವಾಮಿ,ರಾಘವೇಂದ್ರ ಭೋರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.