ರಾಯಚೂರು. ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಿತರಣೆಗೆ ಬಿಡುಗಡೆ ಮಾಡಿದ ಜೋಳವನ್ನು ಅಕ್ರಮವಾಗಿ ದಾಸ್ತಾನು ಮಾಡಿದ
ಗುರುರಾಜ ಶೆಟ್ಟಿ ಇವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮಾನ್ವಿ ತಾಲೂಕಿನ ಪೋತ್ನಾಳ ಹತ್ತಿರದ ಮುದ್ದಂ ಗುಡ್ಡಿ ಸೀಮಾಂತರದಲ್ಲಿರುವ ಗೋದಾಮಿನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ವಿತರಣೆಗೆ ಬಿಡುಗಡೆ ಮಾಡಿದ ಜೋಳವನ್ನು ಅಕ್ರಮವಾಗಿ ದಾಸ್ತಾನು ಮಾಡಿ ರಾಸಾಯನಿಕ ಮಿಶ್ರಣ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಆಹಾರ ಇಲಾಖೆಗೆ ಬಂದ ದೂರಿನನ್ವಯ,
ರಾಯಚೂರಿನ ಸಹಾಯಕ ಆಯುಕ್ತೆ ಮೆಹ ಬೂಬಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂದಾಜು 60 ಲಕ್ಷ ಮೌಲ್ಯದ ಪಡಿತರ ಜೋಳ ವನ್ನು ಜಪ್ತಿ ಮಾಡಿ ಮತ್ತು ರಾಸಾಯನಿಕ ಮಿಶ್ರಣಕ್ಕೆ ಬಳಸುತ್ತಿದ್ದರೆನ್ನಲಾದ 14 ಲಕ್ಷ ಮೌಲ್ಯದ ಯಂತ್ರವನ್ನು ವಶಕ್ಕೆ ಪಡೆದು ಮಾನ್ವಿ ಪೋಲೀಸ್ ಠಾಣೆಯಲ್ಲಿ ಅಕ್ರಮ ದಂಧೆ ನಡೆಸುತ್ತಿದ್ದ ಗುರುರಾಜ ಶೆಟ್ಟಿ ಇವರ ವಿರುದ್ಧ
ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ದಾಳಿ ಮಾಡಿದ ತಂಡದಲ್ಲಿ, ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೃಷ್ಣ ಶಾವಂತಗೇರಾ, ಮಾನ್ವಿ ತಹಶೀಲ್ದಾರ್, ರಾಜು ಫಿರಂಗಿ, ರಾಯಚೂರು ಆಹಾರ ಶಿರಸ್ತೇದಾರ ಬಿ ಆರ್ ವೆಂಕಣ್ಣ ಮತ್ತು ಇತರೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಾನ್ವಿ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಪೋಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.