ರಾಯಚೂರು. ಮನೆಯ ಮುಂದಿನ ಗೇಟ್ ಹಾರಿ ಆವರಣದಲ್ಲಿದ್ದ ಡ್ರೈನೇಜ್ ಕವರ್, ಸಾಗುವಾನಿ ಕಟ್ಟಿಗೆಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ನಗರದ ಸ್ಟೇಶನ್ ರಸ್ತೆಯಲ್ಲಿನ ಉದಯ ನಗರದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಗೇಟ್ ಹಾರಿ ವಸ್ತುಗಳನ್ನು ಕಳವು ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳ್ಳತನ ಮಾಡಿದ ಮನೆಯು ವಾಣಿಜ್ಯೋದ್ಯಮಿ ಸಂಘದ ಜಿಲ್ಲಾಧ್ಯಕ್ಷ ಕಮಲ ಕುಮಾರ್ ಜೈನ್ ಅವರ ಹಳೇ ಮನೆ ಎಂದು ತಿಳಿದು ಬಂದಿದೆ. ಗೇಟ್ಗೆ ಬೀಗ ಹಾಕಿತ್ತು. ಮನೆ ಕೆಲಸ ಮಾಡುವವರು ಇಂದು ಕೆಲಸಕ್ಕೆ ಬಂದಿರಲಿಲ್ಲ. ಇದನ್ನು ಗಮನಿಸಿದ ಮಹಿಳೆ ಗೇಟ್ ಹಾರಿ ಅಲ್ಲಿದ್ದ ಡ್ರೈನೇಜ್ ಕವರ್, ಸಾಗುವಾನಿ ಕಟ್ಟಿಗೆಗಳನ್ನು ಎತ್ತಿಕೊಂಡು ಹೋಗಿದ್ದಾರೆ.
ಆಕೆಗೆ ಇನ್ನಿಬ್ಬರು ಮಹಿಳೆಯರು ಈ ಕೃತ್ಯಕ್ಕೆ ಸಹಕಾರ ನೀಡುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
ಹಿಂದೆಯೂ ಸಹ ಇದೇ ರೀತಿ ಕಳವಾಗಿತ್ತು ಎಂದು ಮನೆ ಮಾಲೀಕರ ಕಮಲ ಕುಮಾರ್ ಜೈನ್ ತಿಳಿಸಿದ್ದಾರೆ.
ಈ ಕುರಿತು ಪಶ್ಚಿಮ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ