Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಸಾರಿಗೆ ನಿಗಮಗಳಿಗೆ 5 ಸಾವಿರ ಬಸ್‌ಗಳು ಸಿಎಂ ಸಿದ್ದರಾಮಯಗಯ ಘೋಷಣೆ

ಸಾರಿಗೆ ನಿಗಮಗಳಿಗೆ 5 ಸಾವಿರ ಬಸ್‌ಗಳು ಸಿಎಂ ಸಿದ್ದರಾಮಯಗಯ ಘೋಷಣೆ

ಬೆಂಗಳೂರು:’ಶಕ್ತಿ’ ಯೋಜನೆಗೆ ಅನುಕೂಲವಾಗಲು ಪ್ರಸಕ್ತ ವರ್ಷದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂನಿಗಮಗಳಿಗೆ ಐದು ಸಾವಿರಕ್ಕೂ ಹೆಚ್ಚಿನ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು, ಈ ಪೈಕಿ ಕೆಎಸ್ಸಾರ್ಟಿಸಿಗೇ ಒಂದು ಸಾವಿರ ಬಸ್ ಖರೀದಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೆಎಸ್ಸಾರ್ಟಿಸಿ ನೂತನವಾಗಿ ಖರೀದಿಸಿರುವ 100 ಕರ್ನಾಟಕ ಸಾರಿಗೆ ಅಶ್ವಮೇಧ ಕ್ಲಾಸಿಕ್ ಬಸಗಳನ್ನು ವಿಧಾನ ಸೌಧ ಮುಂಭಾಗ ಲೋಕಾರ್ವಣೆ ಮಾಡಿ ಮಾತನಾಡಿದ ಅವರು, ಶಕ್ತಿ ಯೋಜನೆ ಅಡಿಯಲ್ಲಿ 250 ಕೋಟಿಗೂ ಹೆಚ್ಚಿನ ಮಹಿಳಾ ಪ್ರಯಾಣಿಕರು ರಾಜ್ಯ ರಸ್ತೆ వారిగ సంశయ నాల్యూ నిగమగళ ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.

ಸಾರಿಗೆ ನಿಗಮಗಳ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಕಳೆದ ನಾಲ್ಕುವರ್ಷಗಳಿಂದ ನಾಲ್ಕೂ ನಿಗಮಗಳಿಗೆ ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿರಲಿಲ್ಲ.ಇದೀಗ ಸರ್ಕಾರ ನಾಲ್ಕೂ ನಿಗಮಗಳಿಗೆ 5,800 ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.ಇದರಿಂದ ಶಕ್ತಿ ಯೋಜನೆಯ ಪ್ರಯಾಣಿಕರು ಹಾಗೂ ರಾಜ್ಯದ ಜನರು ಸುರಕ್ಷಿತ ಮತ್ತು ಉತ್ತಮ ಸಾರಿಗೆ ವ್ಯವಸ್ಥೆ ಪಡೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಚುನಾವಣೆಗೂ ಮುನ್ನ ಮಹಿಳಾ ಸಬಲೀ ಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಭರವಸೆ ಗಳನ್ನು ಸರ್ಕಾರ ಈಡೇರಿಸಿದೆ. ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ಮೂಲಕ ಬೆಲೆ ಏರಿಕೆ,

ಹಣದುಬ್ಬರ, ನಿರುದ್ಯೋಗ ಸಮಸ್ಯೆ ಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಉಚಿತ ಪ್ರಯಾಣದ ಮೂಲಕ ಆರ್ಥಿಕ ಸಬಲರಾಗಲು ಸಾಧ್ಯವಾಗುವಂತಾಗಿದೆ ಎಂದು ಹೇಳಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಸಾ ಪರಿಷತ್ ಸದಸ್ಯ ನಾಗರಾಜ್ ಯಾದವ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನುಕುಮಾ‌ರ್ ಹಾಗೂ ಇತರರಿದ್ದರು.

Megha News