ರಾಯಚೂರು. ಖಜಾನೆ ಇಲಾಖೆಯಲ್ಲಿ ಖಜಾನೆ ಇಲಾಖೆಯ ಉಪನಿರ್ದೇಶಕಿ ಮಹಬೂಬಿ ಅವರ ಮೇಲಿನ ದೂರು ಆಧರಿಸಿ ಸರಕಾರಿ ನೌಕರರ ಸಂಘ ಪದಾಧಿಕಾರಿಗಳ ಸಮ್ಮುಖದಲ್ಲಿ
ಗುಲಬರ್ಗಾ ಜಂಟಿ ನಿರ್ದೇಶಕರಾದ ಅಶೋಕ ವಿಚಾರಣೆ ನಡೆಸಿದರು.
ನ.1 ರಂದು ನೌಕರರ ಸಂಘದಿಂದ ಜಿಲ್ಲಾಧಿಕಾರಿ ಗಳಿಗೆ ಖಜಾನೆ ಉಪ ನಿರ್ದೇಶಕಿ ಮಹಬೂಬಿ ಅವರ ಅಸಭ್ಯ ವರ್ತನೆ ದುರಾಡಳಿತ, ಅನಾವ ಶ್ಯಕ ಬಿಲ್ಲುಗಳನ್ನು ವಾಪಸ್ ಹಾಕುವುದು ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಂತೆ ದೂರು ನೀಡಲಾಗಿತ್ತು, ದೂರನ್ನಾಧರಿಸಿ ಇಂದು ವಿಚಾರಣೆ ನಡೆಸಿದರು.
ವಿವಿಧ ಇಲಾಖೆಯ 30-40 ಜನ ವೇತನ ಸೆಳೆ ಯುವ ವಿಷಯ ನಿರ್ವಾಹಕರು ಹಾಜರಿದ್ದು ಇವರಿಂದ ಆಗುತ್ತಿರುವ ತೊಂದರೆ, ಅನಾವಶ್ಯಕ ವಾಗಿ ಬಿಲ್ಲುಗಳನ್ನು ಮರಳಿಸುವುದು, ನಿವೃತ್ತಿ ಹೊಂದಿದ ನೌಕರರ ಜಿಐಎಸ್, ಸಿಎಲ್,
ನಗದೀಕರಣ, ಪಿಂಚಣಿ ಅಪ್ರೂವಲ್ ಮಾಡದೇ ವಿಳಂಭ ಧೋರಣೆ ಕಚೇರಿಗೆ ಆಗಮಿಸುವ ನೌಕರರೊಂದಿಗೆ ಅಗೌರವದಿಂದ ನಡೆದು ಕೊಳ್ಳುವುದು ಜೊತೆಗೆ ದಾಖಲೆಗಳೊಂದಿಗೆ ಗಮನಕ್ಕೆ ತರಲಾಯಿತು.
ಅಲ್ಲಿಂದ ವಿಚಾರಣಾಧಿಕಾರಿಗಳ ಒಡಗೂಡಿ ಅಪರ ಜಿಲ್ಲಾಧಿಕಾರಿಗಳ ಭೇಟಿ ಮಾಡಿ ಅವರ ಸಮ್ಮುಖದಲ್ಲಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ನೀಡಿದ ಪತ್ರದ ಆಧಾರದ ಮೇಲೆ ಖಜಾನೆ ಉಪ ನಿರ್ದೇಶಕರನ್ನು ಕೂಡಲೇ ಸಾರ್ವಜನಿಕ ಆಡಳಿತ ದೃಷ್ಟಿಯಿಂದ ಜಿಲ್ಲೆಯಿಂದ ವರ್ಗಾಯಿಸಲು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಮಾಜಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಂದೀಶ ,ಮಲ್ಲೇಶ ನಾಯಕ,ಮಲ್ಲೇಶ ಕೊಲಮಿ,ಅಂಜಿನಯ್ಯ,ಗೋವಿಂದ,ಹನಮಂತರಾವ್,ತಾಯಪ್ಪ,ಸುರೇಶ,ಹಕ್,ಶ್ರೀನಿವಾಸ,ವೀರೇಶ,ಹನಮಂತ್ರಾಯ,ಲಕ್ಷ್ಮಣ,ವೀರೇಶ,ಅನಿಲ,
ದೇವರಾಜ್,ಜಿಂದಪ್ಪ,ಸೇರಿದಂತೆ ೩೦-೪೦ ನೌಕರರು ಹಾಜರಿದ್ದರು..