ಬೆಂಗಳೂರು.ರಾಯಚೂರಿನಲ್ಲಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯನ್ನು ಜಿಲ್ಲೆಯಿಂದ ಕಲಬುರಗಿ ಜಿಲ್ಲೆಗೆ ಸ್ಥಳಾಂತರ ಗೊಂಡಿದ್ದು, ತಡೆ ನೀಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಸಚಿವ ಶಿವರಾಜ ತಂಗಡಗಿ, ಸಹಕಾರಿ ಸಚಿವ ಕೆ.ಎನ್.ರಾಜಣ್ಣ ವಿಷಯ ಪ್ರಸ್ತಾಪಿಸಿ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ತಣದಿಂದಲೇ ಸ್ಥಳಾಂತರಗೊಂಡ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ರಾಯಚೂರಿನಲ್ಲಿಯೇ ಮುಂದುವರೆಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಏಕಾಏಕಿ ಕಲಬುರಗಿಗೆ ಸ್ಥಳಾಂತರ ಮಾಡಲಾ ಗಿತ್ತು. ಇದರಿಂದ ಜಿಲ್ಲೆಯ ಸಹಕಾರಿ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಈ ಕಚೇರಿಯನ್ನು ರಾಯಚೂ ರಿನಲ್ಲಿಯೇ ಮುಂದುವರೆಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿ ಸ್ಥಳಾಂತರ ಗೊಂಡ ಆದೇಶಕ್ಕೆ ತಡೆ ನೀಡಿದ್ದಾರೆ.
ಈ ಸಂಬಂಧ ತಕ್ಷಣವೇ ಸಹಕಾರಿ ಇಲಾಖೆಯ ಆಯುಕ್ತರಿಗೆ ಕಲಬುರಗಿಗೆ ಸ್ಥಳಾಂತರಿಸಿದ ಸಹಕಾರಿ ಸಂಘಗಳ ಜಂಟಿ ನಿಬಂಧಕರ ಕಚೇರಿ ಆದೇಶ ರದ್ದುಪಡಿಸಿ ರಾಯಚೂರಿನಲ್ಲಿ ಮುಂದು ವರೆಸುವಂತೆ ಆದೇಶಿಸಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.