ರಾಯಚೂರು,ಏ.೧೪- ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ನಗರದ ಡಾ.ಅಂಬೇಡ್ಕರ ಪುತ್ಥಳಿಯ ಸಮ್ನುಖದಲ್ಲಿ ಅಯ್ಯಣ್ಣ ಮತ್ತು ಶಾಂಭವಿ ಹಾರ ಬದಲಾಯಿಸಿಕೊಳ್ಳುವ ಮೂಲಕವ ದಾಂಪತ್ಯಕ್ಕೆ ಕಾಲಿಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಆಯೋಜಿದಲಾಗಿದ್ದ ಜಯಂತಿ ಕಾರ್ಯಕ್ರಮ ದಲ್ಲಿ ಬಂತೇಜಿಯವರು ಭೌದ್ದ ದರ್ಮಾಚರಣೆ ಪ್ರಕಾರ ಮದುವೆಗೆ ಶುಭ ಕೋರಿದರು. ಮುಖಂಡರುಗಳಾದ ರವೀಂದ್ರನಾಥ ಪಟ್ಟಿ, ಕೆ.ಇ.ಕುಮಾರ,ಭಾಸ್ಜರ ಪ್ರಸಾದ ಹಾಗು ದಂಪತಿಗಳ ಸಂಬಂದಿಕರು ಶುಭ ಹಾರೈಸಿದರು.
ಮದುಮಗ ಅಯ್ಯಣ್ಣ ಮಾತನಾಡಿ ಶೋಷಿತ ಸಮೂದಯಗಳಿಗೆ ಧ್ವನಿ ನೀಡದ ಡಾ.ಅಂಬೇಡ್ಜರ ದಲಿತ ಸೂರ್ಯನಾಗಿ ಉದಯಿಸಿದ ಪವಿತ್ರ ದಿನದಂದು ಮದುವೆಯಾಗಲು ನಿರ್ಧರಿಸಿರುವದಾಗಿ ಹೇಳಿದರು. ನೂರಾರು ಸಂಖ್ರೆಯಲ್ಲಿ ಅಭಿಮಾನಿಗಳು ಭಾಗಿಯಾದರು.