Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ನಗರದಲ್ಲಿ ಕಸ ವಿಲೇವಾರಿ ಕಾರ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕ್ರಮ: ಡಿ.ಸಿ ಚಂದ್ರಶೇಖರ ನಾಯಕ ಖಡಕ್ ಎಚ್ಚರಿಕೆ

ನಗರದಲ್ಲಿ  ಕಸ ವಿಲೇವಾರಿ ಕಾರ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕ್ರಮ: ಡಿ.ಸಿ ಚಂದ್ರಶೇಖರ ನಾಯಕ ಖಡಕ್ ಎಚ್ಚರಿಕೆ

ರಾಯಚೂರು: ನಗರದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು 10 ಜನರ ಒಳಗೊಂಡಂತೆ 2 ತಂಡ ರಚನೆ ಮಾಡಿ ಕಸ ಸಂಗ್ರಹಿಸಬೇಕು ಸೂಪರ್ ವೈಜರ್‌ಗಳು ನೇತೃತ್ವದಲ್ಲಿ ಸಮರ್ಪ ಕವಾಗಿ ವೀಲೆವಾರಿ ಮಾಡಬೇಕು, 4 ದಿನಗಳ ಒಳಗಾಗಿ ಎಲ್ಲವೂ ಸರಿಪಡಿಸಿ ಕಸ ವಿಲೇವಾ ರಿಯಲ್ಲಿ ನಿರ್ಲಕ್ಷ್ಯ ಕಂಡು ಬಂದಲ್ಲಿ ಸೂಪರ್ ವೈಜರ್ ಸೇರಿ ನಿಯೋಜಿಸಿ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರಸಭೆಯ ಘನತ್ಯಾಜ್ಯ ಸಂಗ್ರಹ ವಿಲೇವಾರಿ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಸೂಚಿಸಿದರು.
ನಗರದಲ್ಲಿರು 35 ವಾರ್ಡ್ ಗಳಲ್ಲಿ ನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿ ವಾಹನಗಳ ಮೂಲಕ ವಿಲೇವಾರಿ ಮಾಡಲಾಗುತ್ತಿದೆ, ಆದರೆ ಕಸ ಸಂಗ್ರಹಕ್ಕೆ ಪ್ರತೇಕ ಕಸ ಹಾಕುವ ಸ್ಥಳದಲ್ಲಿ ಕಸ ನಿತ್ಯ ಸಂಗ್ರಹವಾಗುತ್ತಿದೆ, ಇದರಿಂದ ಹಂದಿ ನಾಯಿಗಳು ಚೆಲ್ಲಾಪಿಲ್ಲಿಯಾಗಿಸಿ ದುರ್ವಾಸನೆ ಹರಡಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ,
ಇಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡಿದರೆ ಕಸ ರಸ್ತೆಯಲ್ಲಿ ಯಾಕೆ ಸಂಗ್ರಹವಾ ಗುತ್ತದೆ, ಮನೆ ಮನೆಗೆ ತೆರಳಿ ಕಸ ಸಂಗ್ರಹಸದೇ ಇರುವುದರಿಂದ ಕಸ ರಸ್ತೆಯಲ್ಲಿ ಎಸೆಯುತ್ತಿದ್ದಾರೆ ಇದರಿಂದ ನಿತ್ಯ ತೊಂದರೆಯಾಗುತ್ತಿದೆ ಎಂದರು.
ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡಬೇಕು ಜೊತೆಗೆ ಕಸ ಸಂಗ್ರಹವಾಗುವ ಸ್ಥಳದಲ್ಲಿ ಕಸ ವಿಲೇವಾರಿ ಮಾಡಬೇಕು, ಹಾಗೂ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಸಿಬ್ಬಂದಿಗಳು ರಸ್ತೆಯಲ್ಲಿ ಹಾಲದಂತೆ ಮನವರಿಕೆ ಮಾಡಿ ವಾಹನ ಬಂದ ಸಂದರ್ಭದಲ್ಲಿ ಕಸ ಹಾಕಬೇಕು ಎಂದು ಮನವರಿಕೆ ಮಾಡಬೇಕೆಂದು ತಿಳಿಸಿದರು.
ಕಸ ವಿಲೇವಾರಿ ಮಾಡುವ ವಾಹನ ಚಾಲಕರ ಸಹ ಕಸವನ್ನು ಬಿಟ್ಟು ಹೋಗದೇ ಕಸ ವಿಲೇವಾರಿ ಕಡ್ಡಾಯವಾಗಿ ಮಾಡಬೇಕು, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕಸವನ್ನು ವಾಹ ಬಂದಾಗ ನೀಡಬೇಕು ಎಲ್ಲೆಂದರಲ್ಲಿ ಹಾಕುವಂತಿಲ್ಲ ಈ ಬಗ್ಗೆ ನೋಟಿಸ್ ನೀಡಿ ಎಂದು ನಗರಸಭೆ ಪೌರಾಯು ಕ್ತರಿಗೆ ಸೂಚಿಸಿದರು.
ನಗರದ ಕೆಲ ಪ್ರದೇಶದಲ್ಲಿ ವಿಪರೀತವಾಗಿ ಕಸ ಶೇಖರಣೆಯಾಗುತ್ತಿದೆ ವಿಲೇವಾರಿ ಮಾಡದೇ ಇರುವುದರಿಂದ ಸಮಸ್ಯೆಯಾಗುತ್ತಿದೆ, ವಾಹನಗಳಲ್ಲಿ ಸ್ಪೀಕರ್ ಹಚ್ಚಿ ವಾಹನದಲ್ಲಿ ಕಸ ಹಾಕಲು ತಿಳಿಸಿ ಜಾಗೃತಿ ಮೂಡಸಬೇಕು, ನಗರದಲ್ಲಿ ಬಿತ್ತಿ ಪತ್ರಗಳು ಗೋಡೆ ಬರಹ ಸೇರಿ ಜಾಗೃತಿ ಫಲಕಗಳನ್ನ ಅಳವಡಿಸಬೇಕು ಎಂದರು.
ಸೂಪರ್ ವೈಜರ್‌ಗಳು ಕಸ ಗೂಡಿಸುವವರನ್ನು ಮತ್ತು ವಾಹನ ಚಾಲಕರನ್ನು ನಿಯಂತ್ರಣದಲ್ಲಿಟ್ಟುಕೊಂಡು ಕಸ ವೀಲೆವಾರಿಗೆ ಮುಂದಾಗಬೇಕು, ನಗರದಲ್ಲಿ ವಿಸಿಟ್ ಮಾಡುವ ಸಂದರ್ಭದಲ್ಲಿ ಕಸ ವಿಲೇವಾರಿ ಆಗದೇ ಇರುವುದು ಸ್ಥಳದಲ್ಲಿ ಇರದಿದ್ದರೆ ಅಮಾನತು ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಂದಿನವಾರದಿಂದ ಪ್ರತಿಯೊಂದು ವಾರ್ಡ್‌ಗಳಿಗೆ ಪರಿಶೀಲನೆ ಮಾಡಲಾಗುವುದು, ಜನರಿಂದ ಕಂಪ್ಲೀಟ್ ಬಂದಲ್ಲಿ ಕೆಲಸ ಮಾಡುತ್ತಿಲ್ಲವೆಂದು ಗೊತ್ತಾಗುತ್ತದೆ ನೀವೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಹಂಪಣ್ಣ ಸಜ್ಜನ್ ಸೇರಿದಂತೆ, ಸ್ಯಾನಿಟರ್ ಇಸ್ಪೆಕ್ಟರ್ ಸೇರಿದಂತೆ ಸೂಪರ್ ವೈಜರ್‌ಗಳು ಇದ್ದರು.

Megha News