ರಾಯಚೂರು. ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ಕ್ಕೆ ಸಂಬಂಧಿಸಿದಂತೆ, ರಾಯಚೂರು ಜಿಲ್ಲೆಯಾದ್ಯಂತ ಮತದಾನವು ಮೇ.೦೭ರಂದು ನಡೆಯಲಿದ್ದು ಹಾಗೂ ಈ ಚುನಾವಣೆಯ ಮತ ಎಣಿಕೆಯು ಜೂ.೪ರಂದು ಜಿಲ್ಲಾ ಕೇಂದ್ರದಲ್ಲಿ ಜರುಗಲಿದೆ, ಪ್ರಜಾ ಪ್ರ‍್ರಾತಿನಿಧ್ಯ ಕಾಯ್ದೆ ೧೯೫೧ ರ ಕಲಂ ೧೩೫ (ಸಿ) ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪೂರ್ಣಗೊಳ್ಳುವ ೪೮ ಗಂಟೆಗಳ ಅವಧಿಯಲ್ಲಿ ಎಲ್ಲಾ ರೀತಿಯ ಮಧ್ಯದ ಅಂಗಡಿಗಳಲ್ಲಿ, ಬಾರ್ ಡಿಪೋ ಅಥವಾ ಇನ್ನಾವುದೇ ಸ್ಥಳದಲ್ಲಿ ಮಧ್ಯ ಮಾರಾಟ ಅಥವಾ ಮಧ್ಯ ಪಾನ ಮಾಡುವುದಕ್ಕೆ ಅವಕಾಶವಿರುವುದಿಲ್ಲ ಚುನಾವಣೆಯು ಹಾಗೂ ಮತ ಎಣಿಕೆಯು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಬೇಕಾಗಿರುವ ಹಿನ್ನಲೆಯಲ್ಲಿ ಮಧ್ಯ ಮಾರಾಟ ಮತ್ತು ಮಧ್ಯಪಾನವನ್ನು ನಿಷೇಧಿಸಿ ಶುಷ್ಕ (ಆಡಿಥಿ ಆಚಿಥಿ) ದಿವಸಗಳೆಂದು ಘೋಷಿಸಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಅಬಕಾರಿ ಪರವಾನಿಗೆಗಳ (ಸಾಮಾನ್ಯ ಷರತ್ತುಗಳು) ನಿಯಮಗಳು ೧೯೬೭ ರ ನಿಯಮ ೧೦(ಬಿ) ಮೇರೆಗೆ ಪ್ರದತ್ತವಾದ ಅಧಿಕಾರದನ್ವಯ ಮೇ.೫ರಂದು ಸಂಜೆ ೬:೦೦ಗಂಟೆಯಿಂದ ಮೇ.೭ ರಾತ್ರಿ ೧೨:೦೦ ಗಂಟೆಯವರೆಗೆ ಹಾಗೂ ಜೂ.೪ರಂದು ಬೆಳಿಗ್ಗೆ ೬:೦೦ರಿಂದ ರಾತ್ರಿ ೧೨:೦೦ವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಮಧ್ಯ ಮಾರಾಟ, ಶೇಖರಣೆ, ಮಧ್ಯಪಾನವನ್ನು ನಿಷೇಧಿಸಿ ಹಾಗೂ ಬಾರ್ ಗಳು, ಮತ್ತು ಮಧ್ಯ ಡಿಪೋಗಳನ್ನು ಮುಚ್ಚಿಸಲು ಸಹ ಆದೇಶಿಸಿ ಆ ದಿನಗಳನ್ನು ಶುಷ್ಕ ದಿನಸಗಳೆಂದು ಘೋಷಿಸಿರುತ್ತೇನೆ. ಎಲ್ಲಾ ರೀತಿಯ ಮಧ್ಯ ಮಾರಾಟ ಅಂಗಡಿಗಳು, ಬಾರ್‌ಗಳು, ಮತ್ತು ಮಧ್ಯದ ಡಿಪೋಗಳನ್ನು ಮುಚ್ಚತಕ್ಕದ್ದು. ಮತ್ತು ಲೈಸನ್ಸ್ ದಾರರು ಈ ಪ್ರಯುಕ್ತ ಯಾವುದೇ ಪರಿಹಾರಕ್ಕೆ ಅರ್ಹರಿರುವುದಿಲ್ಲ ಎಂದವರು ಆದೇಶ ಹೊರಡಿಸಿದ್ದಾರೆ