ರಾಯಚೂರು. ರಾಯಚೂರು ನಗರದ ಆಟೋ ಚಾಲಕರು ಸಾರ್ವಜನಿಕರ ಪ್ರಯಾಣದ ದರವನ್ನು ಪ್ರತಿ ಕಿ.ಮೀ ಗೆ ಸುಮಾರು ೧೫ ರೂ.ಗಳಂತೆ ನಿಗದಿಪಡಿಸಬೇಕು ಮತ್ತು ಕಡ್ಡಾಯವಾಗಿ ಆಟೋ ರಿಕ್ಷಾಗಳ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಜೊತೆಗೆ ವಾಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಟೊ ಚಾಲಕರ ಸಂಘಗಳು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಟೋ ಚಾಲಕರು ಪ್ರಯಾಣಿಕರನ್ನು ಕರೆದುಕೊಮಡು ಹೋಗಲು ಪ್ರತಿ ಕಿ.ಮೀಗೆ ಸುಮಾರು ೧೫ ರೂ.ಯಂತೆ ದರವನ್ನು ನಿಗದಿಪಡಿಸಿಕೊಳ್ಳಬೇಕು. ರಾತ್ರಿ ೧೦:೦೦ ಗಂಟೆಯಿAದ ಮುಂಜಾನೆ ೫:೦೦ ಗಂಟೆಯವರೆಗೆ ಹೆಚ್ಚುವರಿಯಾಗಿ ಕೇವಲ ಒಂದುವರೆ ಪಟ್ಟು ದರವನ್ನು ನಿಗದಿಪಡಿಸಕೊಳ್ಳಬೇಕು ಎಂದು ತಿಳಿಸಿದರು.
ಕಡ್ಡಾಯವಾಗಿ ಆಟೋರಿಕ್ಷಾದ ಸಂಪೂರ್ಣ ದಾಖಲೆಗಳನ್ನು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ತೋರಿಸಿ ಆಟೋ ನೊಂದಣಿ ಸಂಖ್ಯೆ ಮತ್ತು ಮಹಿತಿ ಬೋಡ್ ಪಡೆದುಕೊಳ್ಳಬೇಕು ಮತ್ತು ಪ್ರಾದೇಶಿಕ ಸಾರಿಕೆ ಇಲಾಖೆಯಿಂದ ನಗರದ ಪ್ರಮುಖ ಆಟೋ ರಿಕ್ಷಾ ನಿಲ್ದಾಣಗಳಲ್ಲಿ ದರ ಫಲಕಗಳನ್ನು ಸ್ಥಾಪಿಸಬೇಕು ಮತ್ತು ದರ ಪಟ್ಟಿಯನ್ನು ತೋರಿಸುವ ಕ್ಯೂ ಆರ್ ಕೋಡ್‌ಗಳನ್ನು ಪ್ರತಿ ಅಧಿಕೃತ ಆಟೋ ರಿಕ್ಷಾಗಳಿಗೆ ಒದಗಿಸಬೇಕು ಎಂದು ತಿಳಿಸಿದರು.
ಆಟೋ ರಿಕ್ಷಾದಲ್ಲಿ ೩ರಿಂದ ೪ ಜನರನ್ನು ಮಾತ್ರ ಹತ್ತಿಸಿಕೊಳ್ಳಬೇಕು ಹೆಚ್ಚುವರಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಂತಿಲ್ಲ ಮತ್ತು ೬ರಿಂದ ೮ ಶಾಲಾ ಮಕ್ಕಳನ್ನು ಮಾತ್ರ ಆಟೋದಲ್ಲಿ ಕೂರಿಸಿಕೊಳ್ಳಲು ಅವಕಾಶವಿದೆ. ಆಟೋ ಚಾಲಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಲು ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಪ್ರಾದೇಶಿಕ ಸಾರಿಕೆ ಅಧಿಕಾರಿ ವಿನಯಾ ಕಾಟೋಕರ್, ವಾಹನ ನಿರೀಕ್ಷಕ ಬುಗ್ಗಯ್ಯ ರೆಡ್ಡಿ , ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಆಟೋ ಚಾಲಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.