Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsState News

ಅನರ್ಹ ರೈತರ ಖಾತೆಗೆ ಕೃಷಿ ಸಮ್ಮಾನ್ ಯೋಜನೆಯಡಿ ಹಣ: ಜಾರಿ ನಿರ್ದೇಶನಾಲಯದಿಂದ ತನಿಖೆ ಕೃಷಿ ಇಲಾಖೆ ಪತ್ರ

ಅನರ್ಹ ರೈತರ ಖಾತೆಗೆ ಕೃಷಿ ಸಮ್ಮಾನ್ ಯೋಜನೆಯಡಿ ಹಣ: ಜಾರಿ ನಿರ್ದೇಶನಾಲಯದಿಂದ ತನಿಖೆ ಕೃಷಿ ಇಲಾಖೆ ಪತ್ರ
ರಾಯಚೂರು ಜಿಲ್ಲೆಯಲ್ಲಿ 120 ಜನ ಅನರ್ಹರ ಖಾತೆಗೆ ಹಣ
ರಾಯಚೂರು, ಜು.22- ಸಣ್ಣ ಹಿಡುವಳಿದಾರರಿಗೆ  ನೆರವು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಿರುವ ಕೃಷಿ ಸಮ್ಮಾನ್ ಯೋಜನೆಯಡಿ ಅನರ್ಹರಿಗೆ ಹಣ ಪಾವತಿಸಿರುವ ಪ್ರಕರಣವನ್ನು ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಕೃಷಿ ಇಲಾಖೆ ಮುಂದಾಗಿದೆ.
2019 ಸಾಲಿನಿಂದ ಕೇಂದ್ರ ರೂಪಿಸಿರುವ ಕೃಷಿ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರವು 2 ಸಾವಿರ ಎರಡು ಕಂತುಗಳಲ್ಲಿ 4 ಸಾವಿರ ರೂ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಕೃಷಿ ಅಧಿಕಾರಿಗಳ ನಿರ್ಲಕ್ಷö್ಯದಿಂದ ಅನರ್ಹ ರೈತರಿಗೂ ಹಣ ಪಾವತಿಸಿರುವ ಅಂಶ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಕೃಷಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ ಸಿರವಾರದ ತಾಲೂಕಿನಲ್ಲಿ ರೈತರ ಪಹಣಿ ಒಬ್ಬರದ್ದು,ಹಣ ಬೇರೊಬ್ಬರ ಖಾತೆಗೆ ಜಮಾ ಮಾಡಲಾಗಿರುವ ಪ್ರಕರಣ ಬಯಲಾಗಿದೆ. ಅದೇ ಮಾದರಿಯಲ್ಲಿ ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆ,ಆಧಾರ ಸಂಖ್ಯೆ ಜೋಡಣೆ ಹೆಸರಿನಲ್ಲಿ ನಡೆದಿರುವ ಲೋಪಗಳಿಂದ ಅನೇಕ ಅನರ್ಹರ ಖಾತೆಗೆ ಜಮಾ ಮಾಡಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ 120 ಜನ ಅನರ್ಹರ ರೈತರಿಗೆ 6.92 ಲಕ್ಷ ರೂ ಪಾವತಿಸಿರುವದು ಪತ್ತೆಯಾಗಿದೆ.ಕಲ್ಬುರ್ಗಿ ಜಿಲ್ಲೆಯಲ್ಲಿ 868 ಜನ ರೈತರಿಗೆ 42.64 ಲಕ್ಷ ರೂ, ಯಾದಗಿರಿ ಜಿಲೆಯಲ್ಲಿ 94 ಅನರ್ಹ ರೈತರಿಗೆ 3.96 ಲಕ್ಷರೂ, ಬೀದರ ಜಿಲ್ಲೆಯಲ್ಲಿ8082 ಅನರ್ಹ ರೈತರಿಗೆ 353.14 ಲಕ್ಷ ರೂ, ಬಳ್ಳಾರಿ ಜಿಲ್ಲೆಯಲ್ಲಿ 18 ಜನ ಅನರ್ಹ ರೈತರಿಗೆ 1.06 ಲಕ್ಷ ರೂ ಸೇರಿದಂತೆ ರಾಜ್ಯದ 30 ಜಿಲ್ಲೆಗಳಲ್ಲಿ 1 ಲಕ್ಷ 11 ಸಾವಿರ ಅನರ್ಹ ರೈತರಿಗೆ 42ಕೋಟಿ 43 ಲಕ್ಷ ರೂ ಖಾತೆಜಮಾ ಮಾಡಲಾಗಿದೆ.
ಕೇಂದ್ರ ಸರ್ಕಾರ ನಿಧಿಯಲ್ಲಿ 1 ಲಕ್ಷ 99 ಸಾವಿರ ರೂ ಅನರ್ಹರಿಗೆ ಹಣ ಪಾವತಿಸಲಾಗಿದೆ. 122 ಕೋಟಿ ರೂ ಖಾತೆಗೆ ಜಮಾ ಮಾಡಲಾಗಿದ್ದು, 81.94 ಲಕ್ಷ ವಸೂಲಿ ಮಾಡಲಾಗಿದೆ.ಉಳಿದ ಹಣ ವಸೂಲಿ ಬಾಕಿಯಿದೆ. ರಾಜ್ಯ ನಿಧಿಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಹಣ ಪಾವತಿ ಅನ್ಯ ರಾಜ್ಯದವರಿಗೂ ಹಾಕಿರುವದರಿಂದ ಜಾರಿ ನಿರ್ದೆಶನಾಲಯದ(ಇಡಿ) ತನಿಖೆಗೆ ಕೃಷಿ ಆಯುಕ್ತರು ಈಗಾಗಲೇ ಶಿಫಾರಸ್ಸು ಮಾಡಿದ್ದಾರೆ. ಕೃಷಿ ಸಮ್ಮಾನ್ ಯೋಜನೆಯಡಿ ಕೃಷಿ ಅಧಿಕಾರಿಗಳು, ಸಿಬ್ಬಂದಿಗಳು ಅನರ್ಹರ ಖಾತೆಗೆ ಜಮಾ ಮಾಡಿರುವದು ತನಿಖೆಯಿಂದ ಬಯಲಾಗಲಿದೆ.
ಕೃಷಿ ಸಮ್ಮಾನ್  ಯೋಜನೆಯ ಷರತ್ತುಗಳನ್ನು ಉಲ್ಲಂಘಿಸಿ ಅರ್ಹರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಬದಲು ಅನರ್ಹರಿಗೆ ತಲುಪಿಸಿರುವ ಹಿಂದೆ ಕೃಷಿ ಅಧಿಕಾರಿಗಳು,ಸಿಬ್ಬಂದಿಗಳು ಒಳ ಒಪ್ಪಂದ ಮಾಡಿರುವ ಅನುಮಾನಗಳಿವೆ. ರಾಜ್ಯ ಸರ್ಕಾರ ಈಗಾಗಲೇ ಅನರ್ಹರಿಗೆ ತಲುಪಿಸಿರುವ ಹಣವನ್ನು ವಸೂಲಿ ಮಾಡಲು ಸೂಚಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸುವ ಮೂಲಕ ಹಣವಸೂಲಿ ಹಾಗೂ ಅಧಿಕಾರಿಗಳ ವಿರುದ್ದ ಕ್ರಮವಾಗುವ ಸಾಧ್ಯತೆಗಳು ಹೆಚ್ಚಳವಾಗಿವೆ. ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಅನರ್ಹರ ಖಾತೆ ಕೃಷಿ ಸಮ್ಮಾನ್ ಯೋಜನೆ ಹಣ ಪಾವತಿಸಿರುವದು ಪತ್ತೆಯಾಗಿದೆ. ರಾಜ್ಯ ಸರ್ಕಾರ ರಾಜ್ಯದ ನಿಧಿಯಿಂದ ನೀಡಲಾಗುವ ಕೃಷಿ ಸಮ್ಮಾನ್ ಯೋಜನೆ 4 ಸಾವಿರ ರೂ ಪ್ರೋತ್ಸಾಹ ಧನ ನೀಡುವದನ್ನೇ ನಿಲ್ಲಿಸಲು ಸಿದ್ದವಾಗಿದೆ.
ನಡುಕ: ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆ ಜಂಟಿ ನಿರ್ದೇಶಕರುಗಳಿಗೆ ಸೂಚನೆ ನೀಡಿ ಕೃಷಿ ಸಮ್ಮಾನ್ ಯೋಜನೆ ಅನರ್ಹರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಿಂದ ಅತಿಹೆಚ್ಚು ಹಣ ಬೇರೆ ರಾಜ್ಯದ ರೈತರ ಖಾತೆಗೆ ಜಮಾವಾಗಿದೆ ಪತ್ತೆಯಾಗಿದೆ. ಬೇರೆ ಎಲ್ಲಾ ಜಿಲ್ಲೆಗಳ ಅನರ್ಹರ ಜಾಡು ಹುಡುಕಾಟ ಪ್ರಾರಂಭವಾಗಿದೆ. ಈ ಮಧ್ಯೆಯೇ ಜಾರಿ ನಿರ್ದೇಶನಾಲಯಕ್ಕೆ ತನಿಖೆ ಹೊಣೆ ನೀಡಿರುವದು ಅಧಿಕಾರಿಗಳಲ್ಲಿ ನಡುಕು ಪ್ರಾರಂಭವಾಗಿದೆ. ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭಿಸಬೇಕಿದೆ.  ರಾಷ್ಟ್ರೀಯ ಫಸಲ್ ಭೀಮಾ ಯೋಜನೆಯಂತೆಯೇ ಜಿಲ್ಲೆಯಲ್ಲಿ ಕೃಷಿ ಸಮ್ಮಾನ್ ಯೋಜನೆಯೂ ದುರ್ಬಳಕೆಯಾಗಿರುವದು ಕಳವಳಕಾರಿ.

Megha News