Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಬಿಜೆಪಿ ಪ್ರಣಾಳಿಕೆ, ರೈತರು,ಮಹಿಳೆಯರ, ಬಡವರ ಕಲ್ಯಾಣ ಸಂಕಲ್ಪ: ಟೀಕಿಸುವವರಿಗೆ ಅಭಿವೃದ್ದಿಯೇ ಉತ್ತರ- ರಾಜಾ ಅಮರೇಶ್ವರನಾಯಕ

ಬಿಜೆಪಿ ಪ್ರಣಾಳಿಕೆ, ರೈತರು,ಮಹಿಳೆಯರ, ಬಡವರ ಕಲ್ಯಾಣ ಸಂಕಲ್ಪ: ಟೀಕಿಸುವವರಿಗೆ ಅಭಿವೃದ್ದಿಯೇ ಉತ್ತರ- ರಾಜಾ ಅಮರೇಶ್ವರನಾಯಕ

ರಾಯಚೂರು.ಬಿಜೆಪಿ ಪಕ್ಷದಿಂದ ಬಿಡುಗಡೆಗೊಳಿಸಲಾಗಿರುವ ಪ್ರಣಾಳಿಕೆ ಎಲ್ಲ ವರ್ಗದ ಜನರನ್ನು ಒಳಗೊಂಡು ದೇಶದ ಸಮಗ್ರ ಅಭಿವೃದ್ದಿ ದೃಷ್ಟಿಕೋನದಲ್ಲಿ ಜಾರಿಗೊಳಿಸುವ ಸಂಕಲ್ಪವಾಗಿದೆ ಎಂದು ಬಿಜೆಪಿ ಪಕ್ಷದ ನಿಯೋಜಿತ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ನರೇದ್ರ ಮೋದಿ ನೇತೃತ್ವದಲ್ಲಿ ಸಾಕಷ್ಟ ಸಾಧನೆಯನ್ನು ದಾಖಲಿಸಲಾಗಿದೆ.ದೇಶ ಆರ್ಥಿಕ ಪರಸ್ಥಿತಿ ಬದಲಾವಣೆಯೊಂದಿಗೆ ಜಾಗತಿಕ ಮಟ್ಟದಲ್ಲಿ ದಾಖಲೆ ಮಾಡಲಾಗಿದೆ. ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಮೋದಿ ಗ್ಯಾರಂಟಿಗಳನ್ನು ನೀಡಲಾಗಿದೆ. ಪ್ರಮುಖವಾಗಿ ರೈತರು, ಮಹಿಳೆಯರು, ಯುವಜನತೆ ಮತ್ತು ಬಡವರ ಅಭಿವೃದ್ದಿ ಗುರಿಯನ್ನಾಗಿಸಿಕೊಂಡು ಕಾರ್ಯನಿರ್ವಹಿಸುವ ಸಂಕಲ್ಪ ನಮ್ಮದಾಗಿದೆ. ಮೂರು ಲಕ್ಷ ಕೋಟಿ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿಸುವ ಸಬಲೀಕರಣ ಗುರಿಹೊಂದಲಾಗಿದೆ. ಮಹಿಳೆಯರ ಅನಾರೋಗ್ಯ ನಿವಾರಿಸಲ ಆರೋಗ್ಯ ಸೇವೆ ಒದಗಿಸುವದು, ಮಹಿಳೆಯರಿಗೆ ಶೌಚಾಲಯ, ಪೊಲೀಸ್ ಡೆಸ್ಕ ವಿತರಣೆ, ನಾರಿ ಶಕ್ತಿ ಅಧಿನಿಯಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ.ಹಿರಿಯ ನಾಗರೀಕರಿಗೂ ಆಯುಷ್ಮಾನ ಭಾರತ ಯೋಜನೆ ವಿಸ್ತರಣೆ, ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಿಸುವದು, ಮುಂದಿನ ಐದು ವರ್ಷದವರೆಗೆ ಉಚಿತ ಪಡಿತರ ವಿತರಣೆ, ಪಿಎಂ ಅವಾಸ್ ಯೋಜನೆ ವಿಸ್ತರಣೆ, ಉಚಿತ ಸೋಲಾರ್ ವಿದ್ಯುತ್ ಒದಗಿಸುವದು ಉದ್ದೇಶ ಹೊಂದಲಾಗಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸುವದು, ಕೃಷಿ ಉಪಗ್ರಹ ಉಡಾವನೆ, ಕೃಷಿ ಸಮ್ಮಾನ್ ಯೋಜನೆ ಮುಂದುವರೆದಿಕೆ, ನೈಸರ್ಗಿಕ ಕೃಷಿ ಬೆಳವಣಿಗೆ ಒತ್ತು ನೀಡಲಾಗುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವದು, ಯುವಜನರ ಉದ್ಯಮಶೀಲತೆ ಒತ್ತು ನಿಡಿ ಪ್ರವಾಸಿ ತಾಣಗಳ ಅಭಿವೃದ್ದಿ ಮೂಲಕ ಉದ್ಯೋಗ ಸೃಷ್ಟಿಸಲಾಗುತ್ತದೆ ಎಂದರು. ಕಾರ್ಮಿಕರಿಗೆ ಕನಿಷ್ಟ ಕೂಲಿ ಪರಾಮರ್ಶೆ, ವಲಸೆ ಕಾರ್ಮಿಕರಿಗೆ ವಿಶೇಷ ರೈಲು ವ್ಯವಸ್ಥೆ, ಪಿಎಂ ವಿಶ್ವಕರ್ಮ ಯೋಜನೆ ವಿಸ್ತರಣೆ ಮಾಡಲಾಗುತ್ತದೆ ಎಂದರು. ಅನೇಕ ಯೋಜನೆಗಳ ನಿರಂತರವಾಗಿ ಮಂದುವರೆದಿರುತ್ತವೆ. ರೈತರ ಆದಾಯದ್ವಿಗುಣಗೊಳಿಸುವ ಮುಂದುವರೆದಿದೆ. ೧೦ ವರ್ಷಗಳ ಅವಧಿಯಲ್ಲಿ ಅಭಿವೃದ್ದಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಏಮ್ಸ್ ಸ್ಥಾಪಿಸಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯಗಳ ಸಮನ್ವಯತೆ ಮಂಜೂರಾತಿ ಆಗಬೇಕಿದೆ. ಏಮ್ಸ್ ಬೇರೆಲ್ಲೂ ಮಂಜೂರಾಗಿಲ್ಲ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ ಬಿಜೆಪಿ ಬಂದಿರುವ ಪ್ರಣಾಳಿಕೆಯ ಕುರಿತು ಕಾಂಗ್ರೆಸ್ಸನವರ ಮೆಚ್ಚುಗೆ ಬೇಕಿಲ್ಲ. ಜನತೆ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ೩೭೧(ಜೆ) ನಾವೇ ತಂದಿರುವಾಗಿ ಹೇಳುವ ಕಾಂಗ್ರೆಸ್ ನಾಯಕರೇ ಜಾರಿಗೆ ವಿರೋಧಿಸಿ ಸಿಎಂಗೆ ಪತ್ರ ಬರೆಯುತ್ತಾರೆ. ಸಚಿವ ಎಚ್.ಕೆ.ಪಾಟೀಲ್ ಬರೆದಿರುವ ಪತ್ರವೇ ನಿದರ್ಶನ. ಕಳೆದ ೧೦ ವರ್ಷದಲ್ಲಿ ರಾಯಚೂರು ಜಿಲ್ಲೆಗೆ ಹೆದ್ದಾರಿ ರಸ್ತೆ ಬಿಟ್ಟು ೮೬೦೦ ಕೋಟಿ ರೂ ಅನುದಾನ ಬಂದಿದೆ. ಮೂರು ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದೆ.ಒಂದು ಮನೆ ಕಟ್ಟಿಸಿಲ್ಲ ಎಂದರು.
ಈ ಸಂದರ್ಬದಲ್ಲಿ ಜಿಲ್ಲಾ ವಕ್ತಾರ ಕೆ.ಎಂ.ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಜಿ.ಶಂಕರರೆಡ್ಡಿ, ನಗರ ಅಧ್ಯಕ್ಷ ರಾಘವೇಂದ್ರ ಉಟ್ಕೂರು,ಮಲ್ಲಿಕಾರ್ಜುನ ಹಳ್ಳೂರು ಉಪಸ್ಥಿತರಿದ್ದರು.

Megha News