ರಾಯಚೂರು-ಧರವೇಶ ಗ್ರೂಫ್ ವಂಚನೆ ಕುರಿತಂತೆ ತನಿಖೆ ಮುಂದುವರೆಸಿರುವ ಸಿಐಡಿ ತಂಡ ವಾಸೀಮ್ ಮತ್ತು ಬಬ್ಲೂ ಎಂಬ ಆರೋಪಿಗಳ ಮನೆ ಮೇಲೆ ಧಾಳಿನಡೆಸಿ ಅಪಾರ ಪ್ರಮಾಣ ನಗದು ಹಣ ಹಾಗೂ ಚಿನ್ನಾಭರಣ ವಶ ಪಡೆಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮನೆಗಳ ಮೇಲೆ ಧಾಳಿ ನಡೆಸಿ ಮಹತ್ವದ ದಾಖಲೆ,ಬ್ಯಾಂಕ್ ಖಾತೆ ಸೇರಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷಾಂತರರ ಮೌಲ್ಯದ ನಗದು ಹಣ ಹೊಂದಿದ್ದ ಬ್ಯಾಗ್ ಪತ್ತೆಯಾಗಿದೆ.ಹಣ ಮೂಲವೇನು ತಿಳಿದುಬಂದಿಲ್ಲ.ಹೂಡಿಕೆದಾರರಿಂದ ಕೋಟ್ಯಾಂತರ ಹಣ ಸಂಗ್ರಹಿಸಿರುವ ಮೂರು ಜನ ಅರೋಪಿಗಳು ಅಪರಾಧ ವಿಭಾಗದ ಪೊಲೀಸರ ವಶದಲ್ಲಿದ್ದಾರೆ.
ಪ್ರಕರಣದ ತನಿಖೆ ಮುಂದುವರೆದಿದ್ದು ಅಪಾರ ಪ್ರಮಾಣ ನಗದು ಹಣ ಪತ್ತೆಯಾಗುರುವದು ಮಹತ್ವ ಪಡೆದಂತಾಗಿದೆ. ಧಾಳಿ ಸಂದರ್ಬದಲ್ಲಿ ದೊರೆತಿರುವ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಸಿಐಡಿ ಎಸ್ಪಿ ಪುರುಷೋತ್ತಮ ನೇತೃತ್ವದಲ್ಲಿ ತಂಡ ತನಿಖೆ ಮುಂದುವರೆಸಿದೆ.ವಂಚನೆಗೆ ಒಳಗಾದವ ಜನರು ಹೆಚ್ಚಿನಮಾಹಿತಿ,ದೂರು ನೀಡುವಂತೆ ಮನವಿ ಮಾಡಿದ್ದಾರೆ.
Megha News > Crime News > ಧರವೇಶ ಗ್ರೂಪ್ ವಂಚನೆ: ಆರೋಪಿಗಳ ಮನೆ ಮೇಲೆ ದಾಳಿ- ಅಪಾರ ಪ್ರಮಾಣ ನಗದು,ಚಿನ್ನಾಭರಣ ವಶ
ಧರವೇಶ ಗ್ರೂಪ್ ವಂಚನೆ: ಆರೋಪಿಗಳ ಮನೆ ಮೇಲೆ ದಾಳಿ- ಅಪಾರ ಪ್ರಮಾಣ ನಗದು,ಚಿನ್ನಾಭರಣ ವಶ
Tayappa - Raichur29/07/2024
posted on
Leave a reply