Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Entertainment NewsNational NewsState News

ಮಾರ್ಚ ೨೦ ರಿಂದ ಮೂರು ದಿನ ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಗ್ರಂಥಾಲಯ ಸಮ್ಮೇಳನ- ಕುಲಪತಿ ಡಾ.ಹನುಮಂತಪ್ಪ

ಮಾರ್ಚ ೨೦ ರಿಂದ ಮೂರು ದಿನ ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಅಂತರ ರಾಷ್ಟ್ರೀಯ ಗ್ರಂಥಾಲಯ ಸಮ್ಮೇಳನ- ಕುಲಪತಿ ಡಾ.ಹನುಮಂತಪ್ಪ

ರಾಯಚೂರು ಫೆ.4- ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮಾರ್ಚ್ 20 ರಿಂದ 22ರವರೆಗೆ ಭಾರತೀಯ ಗ್ರಂಥಾಲಯ ಸಂಘದಿಂದ ನಡೆಯಲಿರುವ 70ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ರಾಷ್ಟ್ರದಾದ್ಯಂತ ಸುಮಾರು 400 ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವಿಯ ಕುಲಪತಿ ಎಂ.ಹನುಮಂತಪ್ಪ ಅವರು ಹೇಳಿದರು.
ಫಮಂಗಳವಾರ, ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಮತ್ತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ ಕಲಬುರಗಿ ಇವರಿಂದ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನದಿಂದ ಗ್ರಂಥಪಾಲಕರು ಮತ್ತು ಗ್ರಂಥಾಲಯ ವಿಜ್ಞಾನ ಶಿಕ್ಷಕರಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುವ ನಿರೀಕ್ಷೆಯಿದೆ ಎಂದರು.
ಸಮ್ಮೇಳನವು ಗ್ರಂಥಾಲಯಗಳು ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಒತ್ತಿ ಹೇಳಲಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನವು ಸಮುದಾಯವನ್ನು ಬೆಳೆಸುವ ಪ್ರಾಮುಖ್ಯತೆಯ ಬಗ್ಗೆ ತಿಳಿಯಬಹುದಾಗಿದೆ.
ಸಮ್ಮೇಳನದಲ್ಲಿ ನಾನಾ ವಿಷಯಗಳ ಮೇಲೆ ಚರ್ಚೆ ನಡೆದ ನಂತರ ಪ್ರಮುಖ ಶಿಫಾರಸಗಳನ್ನು ಭಾರತ ಸರ್ಕಾರಕ್ಕೆ ಮತ್ತು ಯುಜಿಸಿಗೆ ಸಲ್ಲಿಸಲಾಗುತ್ತದೆ ಎಂದರು.
ಗ್ರಂಥಾಲಯಗಳಲ್ಲಿ ಕೃತಕ ಬುದ್ಧಿಮತ್ತೆ ಬಳಕೆ,‌ ಗ್ರಂಥಾಲಯ ಸಂಪನ್ಮೂಲಗಳು, ಹೊಸ ಹೊಸ ತಂತ್ರಜ್ಞಾನಗಳು, ಸಿಬ್ಬಂದಿ ತರಬೇತಿಯ ಅಗತ್ಯತೆ ಸೇರಿದಂತೆ ನಾನಾ ವಿಷಯಗಳ‌ ಮೇಲೆ ಚರ್ಚೆ ನಡೆಯಲಿದೆ‌ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಗುರುರಾಜ ಸುಂಕದ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್ ಮಚೇಂದ್ರನಾಥ‌ ,ಡಾ.ಪ್ರಮೋದ ಕಟ್ಟಿ ಸೇರಿ ಇತರರು ಇದ್ದರು.

Megha News