Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ಡಾ.ಜಯಪ್ರಕಾಶ ಬೆಟ್ಟದೂರು ಮೇಲೆ ಹಾಡುಹಗಲೆ ಗುಂಡಿನ ದಾಳಿ: ಅಪಾಯದಿಂದ ಪಾರು

ಡಾ.ಜಯಪ್ರಕಾಶ ಬೆಟ್ಟದೂರು ಮೇಲೆ ಹಾಡುಹಗಲೆ ಗುಂಡಿನ ದಾಳಿ: ಅಪಾಯದಿಂದ ಪಾರು

ರಾಯಚೂರು. ನಗರದ ಬೆಟ್ಟದೂರು ಆಸ್ಪತ್ರೆಯ ಸ್ತ್ರಿರೊಗ ತಜ್ಞ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ಇವರ ಕಾರಿನ‌ ಮೇಲೆ ಗುಂಡಿನ‌ ದಾಳಿ ನಡೆದ ಘಟನೆ ಜರುಗಿದೆ.

ನಗರದ ಹೊರವಲಯ ಸಾಥ್‌ಮೈಲ್ ಕ್ರಾಸ್ ನಿಂದ ತೆರಳುತ್ತಿದ್ದಾಗ ದ್ವಿ ಚಕ್ರ ವಾಹನದಲ್ಲಿ ಬಂದ ಅಪರಚಿತರು ಕಾರಿನ‌ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಡಾ.ಜಯಪ್ರಕಾಶ ಬೆಟ್ಟದೂರು ಅವರು ಇಂದು‌ ಮದ್ಯಾಹ್ನ 2.30ಕ್ಕೆ ರಾಯಚೂರಿನಿಂದ ಮಾನ ವಿಗೆ ಹೋಗುವಾಗ ಸಾಥ ಮೈಲ್ ಕ್ರಾಸ್ ಹತ್ತಿರ‌ ಇವರ ಕಾರಿನ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಗುಂಡಿನ‌ ದಾಳಿ ಮಾಡಿದ್ದು, ಕಾರಿನ ಬ್ಯಾನೆಟ್‌ಗೆ ಗುಂಡು ತಗುಲಿದ್ದು, ವೈದ್ಯರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಈ ಘಟನೆ ಕುರಿತು ಖಚಿತ ಮಾಹಿತಿ ತಿಳಿದು ಬಂದಿಲ್ಲ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಬೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ‌.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Megha News