ರಾಯಚೂರು,ಏ.೭- ರಾಜೀವ್ ಗಾಂಧಿ ಸೂಪರ್ ಸ್ಪೇಷಾಲಿಟಿ ಅಸ್ಪತ್ರೆಯ ವೈಧ್ಯ ಡಾ.ವಿಶ್ವನಾಥ ರೆಡ್ಡಿಯನ್ನು ಸೇವೆಯಿಂದ ಅಮಾನತ್ ಗೊಳಿಸಿ ಆಡಳಿತಮಂಡಳಿ ಉಪಾಧ್ಯಕ್ಷ ಮೊಹ್ಮದ ಮೊಹಸೀನ್ ಅದೇಶಿಸಿದ್ದಾರೆ.
ಸೇವೆಗೆ ಸಮರ್ಪಕವಾಗಿ ಹಾಜರಾಗದೆ ಇರುವ ಅರೋಪದ ಮೇಲೆ ಅಮಾನತ್ ಗೊಳಿಸಲಾಗಿದೆ.
ರಾಜೀವಗಾಂಧಿ ಸೂಪರ ಸ್ಪೇಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರೊಲೊಜಿ ವಿಭಾಗ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯಲ್ಜಿದ್ದ ಡಾ.ವಿಶ್ವನಾಥರೆಡ್ಡಿ ಸೇವೆಗೆ ಗೈರಾಗಿರುವ ಕುರಿತು ನಿರ್ದೇಶಕ ರು ನೀಡಿದ ವರದಿ ಆದಾರಿಸಿ ಅಮಾನತ್ ಗೊಳಿಸಲಾಗಿದೆ. ಆಸ್ಪತ್ರೆ ಸಮಯದಲ್ಲಿ ಸ್ವತಃ ಅಸ್ಪತ್ರೆ ಕ್ಲಾರಿಟಿಯಲ್ಲಿಯೇ ಕಾರ್ಯನಿರ್ವಹಿಸಿದ್ದು ಆಸ್ಪತ್ರೆಗೆ ಬಾರದೇ ಇರುವದು ಬಯೋಮೆಟ್ರಿಕ್ ಹಾಜರಾತಿಯಲ್ಲಿಯು ಧೃಡಪಟ್ಟಿದ್ದರಿಂದ ಅಮಾನತ್ ಗೊಳಿಸಿ ಆದೇಶಿಸಲಾಗಿದೆ
Megha News > Local News > ಸೇವೆಗೆ ಗೈರು: ಓಪೆಕ್ ಆಸ್ಪತ್ರೆಯ ವೈಧ್ಯ ಡಾ.ವಿಶ್ವನಾಥರೆಡ್ಡಿ ಅಮಾನತ್
ಸೇವೆಗೆ ಗೈರು: ಓಪೆಕ್ ಆಸ್ಪತ್ರೆಯ ವೈಧ್ಯ ಡಾ.ವಿಶ್ವನಾಥರೆಡ್ಡಿ ಅಮಾನತ್
Tayappa - Raichur07/04/2025
posted on

Leave a reply