ರಾಯಚೂರು. ತುಂಗಭದ್ರಾ ಎಡದಂಡೆ ಕಾಲು ವೆಯ ಕೊನೆ ಭಾಗದ ರೈತರಿಗೆ ನೀರು ತಲುಪದೇ ಇರುವುದನ್ನು ಖಂಡಿಸಿ ಮೈಲ್ 104ರ ರೈತರು ಸಾತ್ ಮೈಲ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ವಾಹನ ಸವಾರರು ಪರದಾಡಿದರು.
ಕೊನೆ ಭಾಗದ ಮಾನವಿ, ಸಿರವಾರ ಮತ್ತು ರಾಯಚೂರು ತಾಲೂಕಿಗೆ ನೀರು ಸಮರ್ಪಕವಾಗಿ ಹರಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ಇಂದು ರಾಜ್ಯ ಹೆದ್ದಾರಿ ಬಂದ್ ಮಾಡಿ ರೈತರು ರಸ್ತೆಯಲ್ಲಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬೆಳಗ್ಗೆಯಿಂದ ಆರಂಭವಾದ ಪ್ರತಿಭಟನೆ ಮಧ್ಯಾಹ್ನದ ವರೆಗೂ ಮುಂದುವರೆಯಿತು, ಸುಮಾರು 8 ಗಂಟೆಗಳ ವರೆಗೆ ಪ್ರತಿಭಟನಾ ಕಾರರು ಮೇಲೇಳದೆ ರಸ್ತೆಯಲ್ಲಿ ಟಿಕಾಣಿ ಹೂರಿದರು.
ರಾಯಚೂರು-ಬೆಳಗಾವಿ, ರಾಯಚೂರು- ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಹತ್ತಾರು ಕಿ.ಮೀ.ವರೆಗೆ ಲಾರಿ, ಬಸ್, ದ್ವೀ ಚಕ್ರ ವಾಹನ ಸೇರಿದಂತೆ ಬಹುತೇಕ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತವು, ಇನ್ನು ಕೆಲ ವಾಹನಗಳು ಮಾರ್ಗ ಬದಲಿಸಿದಕೊಂಡು ಹೋಗಲಾಯಿತು.
ಬಸ್‌ಗಳಲ್ಲಿ ಸಂಚರಿಸಿದ ಪ್ರಯಾಣಿಕರು ಸಂಕಷ್ಟ ಅನುಭವಿಸಿದರು. ತಮ್ಮ ಕೆಲಸಕ್ಕೆ ರಾಯಚೂರು ನಗರಕ್ಕೆ ಬರುವ ಜನರು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದರು.