ರಾಯಚೂರು. ಮಸ್ಕಿ ತಾಲೂಕಿನ ಬಳಗಾನೂರು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಸಂಬಂಧಿಸಿದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಶಂಕಿತ ಆರೋಪಿಗಳ ವಿಚಾರಣೆಗೆ ತೆರಳಿದಾಗ ನಾಲ್ಕೈದು ಜನರ ಗುಂಪು ಪೇದೆಗಳಾದ ಮಂಜುನಾಥ, ಗೋಪಾಲ ಎನ್ನುವರ ಮೇಲೆ ದಾಳಿ ನಡೆಸಿದ್ದರು.
ಪೇದೆಗಳಿಬ್ಬರು ಗಂಭಿರ ಗಾಯಗೊಂಡು ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್ಪಿ ನಿಖಿಲ್ ಬಿ. ಗಾಯಾಳು ಸಿಬ್ಬಂದಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಬಳಗಾನೂರು ಪೊಲೀಸ್ ಠಾಣೆ, ಹಸ್ಮಕಲ್ ಗ್ರಾಮ ಹಾಗೂ ಮಸ್ಕಿಗೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲನೆ ನಡೆಸಿದರುಬ. ಬಳಿಕ ಸುದ್ದಿಗಾರರ ಜತೆ ಮಾತಾನಾಡಿ, ಪೊಲೀಸರ ಮೇಲೆ ದಾಳಿ ಮಾಡುವುದು ಹೊಸದೇನಲ್ಲ. ಇಂತಹ ಘಟನೆಗಳು ಆಗಾಗ ನಡೆಯುತ್ತವೆ. ಶೈಕ್ಷಣಿಕ, ಕಾನೂನಿನ ತಿಳಿವಳಿಕೆ ಕೊರತೆಯಿಂದ ಇಂತಹ ಘಟನೆ ನಡೆಯುತ್ತವೆ. ಈ ಬಗ್ಗೆ ಆರು ಜನರ ಮೇಲೆ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಸಿಂಧನೂರು ಗ್ರಾಮೀಣ ಸಿಪಿಐ, ಇಬ್ಬರು ಪಿಎಸ್‌ಐಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಶೀಘ್ರವೇ ಅರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಲಲಾಗಿತ್ತದೆ ಎಂದರು.