ರಾಯಚೂರು. ಜಿಲ್ಲೆಯಲ್ಲಿ ಶ್ರೀಮಂತರನ್ನೇ ಟಾರ್ಗೆಟ್ ಮಾಡಿಕೊಂಡು ಹಣದ ಬೇಡಿಕೆ ಇಟ್ಟುಕೊಂಡು ಮುಂಬೈ, ದೆಹಲಿ ಸೇರಿ ಇತರೆ ಕಡೆಯಿಂದ ದೂರವಾಣಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡುವ ಪ್ರಕರಣಗಳ ಹೆಚ್ಚಳವಾಗುತ್ತಿದೆ.
ಇತ್ತೀಚಿಗೆ ವೈದ್ಯರಿಗೆ ಕರೆ ಮಾಡಿ ಹಣ ಬೇಡಿಕೆ ಇಟ್ಟು ವೈದ್ಯರ ಮೇಲೆ ಗುಂಡು ಹಾರಿಸಿರುವ ಪ್ರಕರಣ ಮಾಸುವ ಮುನ್ನವೇ ಅಂತಹದ್ದೆ ಹಣದ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡದ ಪ್ರಕರಣ ನಡೆದಿದೆ.
ರಾಯಚೂರಿನ ಸರಾಫ್ ವರ್ತಕರೊಬ್ಬರಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿರುವುದು ಬಯಲಾಗಿದೆ. ದೆಹಲಿಯಿಂದ ಸಿಬಿಐ ಅಧಿಕಾರಿ ಎಂದು 89484376161 ಹಾಗೂ 8114239 484 ಈ ದೂರವಾಣಿ ಸಂಖ್ಯೆಯಿಂದ ಬಂಗಾರದ ಅಂಗಡಿ ಮಾಲೀಕ ವಿ. ಸುರೇಶ ಎನ್ನುವವರ ಮೊಬೈಲ್‌ಗೆ ಕರೆ ಮಾಡಿ ಯೂಟ್ಯೂಬ್ ನಲ್ಲಿ ತಮ್ಮ ವಿಡಿಯೋ ವೈರಲ್ ಆಗಿದೆ, ಅದನ್ನು ತಡೆಯಲು 25 ಸಾವಿರ ಹಣದ ಬೇಡಿಕೆ ಇಟ್ಟು ವರ್ಗಾವಣೆ ಮಾಡಲು ತಿಳಿಸಿದ್ದಾರೆ.
ದೆಹಲಿ ಸಿಬಿಐ ಅಧಿಕಾರಿ ಸುಭಾಷ ಕುಮಾರ ಜೈಸ್ವಾಲ್ ಎಂದು ಹೇಳಿಕೊಂಡು ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾನೆ.
ಸಿಬಿಐ ಅಧಿಕಾರಿ ಭಾವಚಿತ್ರ ಇರುವ ಐಡಿ ಕಾರ್ಡ್ ಹಾಗೂ ಪೋಲಿಸ್ ಸಮವಸ್ತ್ರ ಕೋಟ್ ಧರಿಸಿದ್ದ ಭಾವಚಿತ್ರವನ್ನು ಸುರೇಶ ಅವರ ವಾಟ್ಸಾಪ್ ನಂಬರ್‌ಗೆ ಹಾಕಿದ್ದಾರೆ. ಬೆನ್ನಲ್ಲೆ ಮತ್ತೊಂದು ಹೇಮಂತ ಮಲ್ಹೋತ್ರ ಎನ್ನುವರಿಂದ ಮತ್ತೊಂದು ಕರೆ ಬಂದಿದೆ.
ಈ ಕುರಿತು ಸುರೇಶ ಅವರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದ, ತನಿಖೆ ನಡೆಸುವುದಾಗಿ ಸೈಬರ್ ಕ್ರೈಂ ಪಿಎಸ್‌ಐ ತಿಳಿಸಿದ್ದಾರೆ.