ರಾಯಚೂರು. ವಿಮಾನ ನಿಲ್ದಾಣಕ್ಕೆ ಸೇರಿದ ಜಮೀನನಲ್ಲಿ ನಿರ್ಮಾಣವಾಗಿರುವ ಏಗನೂರು ಗ್ರಾಮದ ೩೦ ಮನೆಗಳನ್ನು ತೆರವುಗೊಳಿಸುವಂತೆ ಸಹಾಯಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ಈ ಹಿಂದೆ ದಂಡ ಗ್ರಾಮಸ್ಥರಿಗೆ ತೆರವುಗೊ ಳಿಸುವಂತೆ ನೀಡಿದ್ದ ನೊಟಿಸ್ ಹಿನ್ನಲೆಯಲ್ಲಿ ಹೈಕೋರ್ಟಮೊರೆ ಹೋಗಿ ತಡೆಯಾಜ್ಞೆ ತರಲಾಗಿತ್ತು. ಈಗ ಏಗನೂರು ಗ್ರಾಮದ ಸರ್ವೆ ೫, ೧, ೩೩೩ ಮತ್ತು ೩೩೦ಗಳಲ್ಲಿ ವಾಸಮಾಡುತ್ತಿರುವ ೩೦ ನಿವಾಸಿಗಳಿಗೆ ತೆರವುಗೊಳಿಸುವಂತೆ ಅಂತಿಮ ನೋಟಿಸ್ ಜಾರಿಗೊಳಿಸಲಾಗಿದೆ. ಕಂದಾಯ ಮತ್ತು ಸರ್ವೆ ಇಲಾಖೆಗಳ ನಡೆಸಿದ ಜಂಟಿ ಸರ್ವೆಯಂತೆ ವಿಮಾನ ನಿಲ್ದಾಣಕ್ಕೆ ಸೇರಿದ ಜಮೀನನಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ೨೦ ದಿನಗಳಲ್ಲಿ ತೆರವುಗೊಳಿಸದೇ ಇದ್ದರೆ ನಿಯಮಾನುಸಾರ ತೆರವುಗೊಳಿಸುವದಾಗಿ ಎಚ್ಚರಿಸಿದ ನೋಟಿಸ್ ಜಾರಿಗೊಳಿಸಲಾಗಿದೆ.
ವಿಮಾನನಿಲ್ದಾಣ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆಗಳು ಒಂದು ಕಡೆ ನಡೆಯುತ್ತಿರುವಾಗ ಇನ್ನೊಂದು ಕಡೆ ಅಗತ್ಯವಿರುವ ಭೂ ಸ್ವಾಧೀನ ಪಡಿಸಿಕೊಳ್ಳದೇ ಜಿಲ್ಲಾಡಳಿತ ಅವಸರದಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳು ಕಾಮಗಾರಿ ಪ್ರಾರಂಭಕ್ಕೆ ಹಿನ್ನಡೆಯಾಗುವಂತಾಗಿದೆ.