ರಾಯಚೂರು: ತಂಬಾಕು ಬೆಳೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ಬೆಳೆ ನಷ್ಟವಾಗಿರುವ ಘಟನೆ ತಾಲೂಕಿನ ವೈ.ಮಲ್ಲಾಪೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.
ವೈ.ಮಲ್ಲಾಪೂರ ಗ್ರಾಮದ ರೈತ ಮುನಿಚಂದ್ರ ಎನ್ನುವವ ಜಮೀನಿನಲ್ಲಿ ತಂಬಾಕ ಬೆಳೆ ರಾಶಿ ಮಾಡಲಾಗಿತ್ತು. 4 ಎಕರೆ ಜಮೀನಿನಲ್ಲಿ ರೈತ ಮುನಿಸ್ವಾಮಿ ಲಕ್ಷಾಂತರ ರೂ ಸಾಲ ಮಾಡಿ ತಂಬಾಕು ಬೆಳೆ ಬೆಳೆದಿದ್ದ, ತಂಬಾಕು ಬೆಳೆ ಉತ್ತಮ ಫಸಲು ಬಂದಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ಕಟಾವು ಮಾಡಿ ಜಮೀನುನಲ್ಲಿಯೇ ರಾಶಿ ಮಾಡಿದ್ದ, ರಸ್ತೆ ಬದಿಯಲ್ಲಿ ಜಮೀನು ಇದ್ದ ಕಾರಣ ವಾಹನ ಸವಾರರು ದೂಮಪಾನ ಮಾಡಿ ರಸ್ತೆ ಬದಿ ಬಿಸಾಡಿದ್ದರಿಂದ ಕಸಕ್ಕೆ ಬೆಂಕಿ ಹತ್ತಿ ಜಮೀನಿ ನಲ್ಲಿರುವ ತಂಬಾಕು ಬೆಳೆಗೆ ಆವರಿಸಿದೆ, ಇದರಿಂದ ಬೆಂಕಿ ತಂಬಾಕು ಬೆಳೆಗೆ ತಗುಲಿದ್ದರಿಂದ ಸುಮಾರು 1 ಲಕ್ಷ ನಷ್ಟ ತಂಬಾಕು ಬೆಳೆ ನಷ್ಟವಾಗಿದೆ.
ಲಕ್ಷಾಂತರ ರೂ.ಸಾಲ ಮಾಡಿ ತಂಬಾಕು ಬೆಳೆ ಬೆಳೆಸಿದ್ದ ರೈತನಿಗೆ ದಿಕ್ಕು ತೋಚದಂತಾಗಿದ್ದು ಸರ್ಕಾರ ರೈತನ ನೆರವಿಗೆ ದಾವಿಸಿ ಬೆಳೆ ನಷ್ಟ ಪರಿಹಾರ ಒದಗಿಸಿಕೊಡಬೇಕಾಗಿದೆ. ಈ ಕುರಿತು ಯರಗೇರಾ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.