ರಾಯಚೂರು: ಜೋಳದ ಹೊಲಕ್ಕೆ ತಗುಲಿದ ಬೆಂಕಿ ಲಕ್ಷಾಂತರ ರೂ. ಬೆಳೆ ಹಾನಿಯಾದ ಘಟನೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ನಡೆದಿದೆ.
ರಾಶಿ ಮಾಡಲು ಕಟಾವ್ ಮಾಡಿದ್ದ ಸೊಪ್ಪೆಗೆ ಬೆಳಗಿನಜಾವ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಗ್ರಾಮದ ರೈತ ರಾಜಶೇಖರ ಎಂಬುವವರ ಜೋಳದ ಬೆಳೆ ಸಂಪೂರ್ಣ ಹಾನಿಯಾಗಿದೆ.
6 ಎಕರೆಯಲ್ಲಿ ಬೆಳೆದಿದ್ದ ಸುಮಾರು ಹತ್ತು ಲಕ್ಷ ರೂಪಾಯಿ ಬೆಳೆ ಬೆಂಕಿಗಾಹುತಿಯಾಗಿದ್ದು, ಜೋಳದ ಸೊಪ್ಪೆ, ಜಮೀನಿನಲ್ಲಿನ ಸಾಲುಗಳಿಗೂ ಹೊತ್ತಿಕೊಂಡಿರುವ ಬೆಂಕಿ ಕಿಡಿಗೇಡಿಗಳ ಕೃತ್ಯದಿಂದ ಇಡೀ ಹೊಲಕ್ಕೆ ಬೆಂಕಿ ಇಡಲಾಗಿದೆ ಎಂದು ರೈತ ರಾಜಶೇಖರ ಅರೋಪಿಸುತ್ತಿದ್ದಾರೆ.
ಸುಮಾರು ಎರಡುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ ರೈತನಿಗೆ ಅಘಾತ ಉಂಟಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಬೆಳೆ ಸಂಪೂರ್ಣ ಭಸ್ಮವಾಗಿದೆ.
ಬೆಳೆ ನಾಶಕ್ಕೆ ಪರಿಹಾರ ಒದಗಿಸುವಂತೆ ರೈತ ರಾಜಶೇಖರ ಒತ್ತಾಯಿಸುತ್ತಿದ್ದು, ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.