Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime News

ಲಾರಿ- ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು, ಓರ್ವನ ಸ್ಥಿತಿ ಗಂಭೀರ

ಲಾರಿ- ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು, ಓರ್ವನ ಸ್ಥಿತಿ ಗಂಭೀರ

ಸಿಂಧನೂರು.ತಾಲ್ಲೂಕಿನ ಪಗಡದಿನ್ನಿ ಕ್ರಾಸ್ ಬಳಿ ಲಾರಿ ಮತ್ತು ಅಶೋಕ್ ಲೇವ್ಲ್ಯಾಂಡ್ ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದರೆ, ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ಬೆಳಗಿನ ಜಾವ ೪ ಗಂಟೆಗೆ ನಡೆದಿದೆ.

ಮೃತರು, ನಗರದ ಸಾಯಿ ಸಂಗಮ ಸಪ್ಲಾಯರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಸ್ಮಾಯಿಲ್ ರಷೀದ್ (೨೫) ಮಹಿಬೂಬಿಯಾ ಕಾಲೋನಿ, ರವಿ ರಾಜಪ್ಪ (೨೦) ಬುಕ್ಕನಹಟ್ಟಿ, ರಮೇಶ ನಿಂಗಪ್ಪ ಕುರುಬರು ಕಣೇ ಕಲ್ಲೂರು (೨೮), ಅಂಬ್ರೇಶ್ ಸೂಗಪ್ಪ ಕಣೇಕಲ್ಲೂರು (೨೮) ಮೃತದುದೈರ್ವಿಗಳಾಗಿದ್ದಾರೆ‌.
ನಗರದ ಸಾಯಿಸಂಗಮ ಸಪ್ಲಾಯರ್ಸ್ ನಿಂದ ಮುದ್ದಾಪುರಗೆ ಅಶೋಕ್ ಲೇವ್ಲ್ಯಾಂಡ್ ಮಿನಿ ಟ್ರಕ್‌ನಲ್ಲಿ ಮುದ್ದಾಪುರಗೆ ತೆರಳುತ್ತಿದ್ದಾಗ ಮಸ್ಕಿಯಿಂದ ಸಿಂಧನೂರಿಗೆ ಬರುತ್ತಿದ್ದ ಲಾರಿ ಮುಖಾಮುಖಿಯಾಗಿದ್ದು, ಅಪಘಾತ ಸಂಭವಿಸಿದೆ. ಅಶೋಕ್ ಲೇವ್ಲ್ಯಾಂಡ್ ಮಿನಿ ಟ್ರಕ್ ನಲ್ಲಿದ್ದ ಐದು ಜನರಲ್ಲಿ ನಾಲ್ಕು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೂಳಿದ ಓರ್ವ ಸಮೀರ್ ಮನೋಜ್ ಬಂಗಾಲಿ ಎನ್ನುವವರಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ವ್ಯಕ್ತಿಗಳ ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರಿಸಿ ಮರಣೋತ್ತರ ಪರೀಕ್ಷ ನಡೆಸಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೃತ ವ್ಯಕ್ತಿಗಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ವೀರಾರೆಡ್ಡಿ, ಪಿಎಸ್‌ಐ ಮಹ್ಮದ್ ಇಷಾಕ್ ಅವರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

Megha News