Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Crime News

ಕೃಷ್ಣಾನದಿ ಬ್ರಿಜ್ ಮೇಲೆ ಬೈಕ್‌ಗಳು ಮುಖಾಮುಖಿ ಡಿಕ್ಕಿ ನಾಲ್ಕು ಜನ ಗಂಭೀರ ಗಾಯ

ಕೃಷ್ಣಾನದಿ ಬ್ರಿಜ್ ಮೇಲೆ ಬೈಕ್‌ಗಳು ಮುಖಾಮುಖಿ ಡಿಕ್ಕಿ ನಾಲ್ಕು ಜನ ಗಂಭೀರ ಗಾಯ

ರಾಯಚೂರು. ಕೃಷ್ಣಾನದಿಯ ಬ್ರಿಜ್ ಮೇಲೆ ಸಂಚಾರ ಆರಂಭವಾಗಿ 5 ದಿನಗಳು ಕಳಿದಿಲ್ಲ, ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ 4 ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ ದೇವಸುಗೂರು ಹತ್ತಿರ ಕೃಷ್ಣನದಿ ಬ್ರಿಜ್ ಮೇಲೆ ಘಟನೆ ನಡೆದಿದ್ದು, ಒಂದು ಬೈಕ್ ನಲ್ಲಿರುವವರು ಮದ್ಯಪಾನ ಸೇವಿಸಿದ್ದು, ಎದುರಿಗೆ ಬರುತ್ತಿರುವ ಬೈಕ್‌ಗೆ ಡಿಕ್ಕಿ ಹೊಡೆದಿ ದ್ದಾರೆ. ಪರಿಣಾಮ 4 ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಶಕ್ತಿನಗರ ಪೋಲಿಸ್ ಠಾಣೆಯ ಪೋಲಿಸರು ಬೇಟಿ ನೀಡಿ
ಗಾಯಗೊಂಡವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಗಾಗಿ ದಾಖಲಿಸಿದ್ದಾರೆ.
ಈ ಕುರಿತು ತೆಲಂಗಾಣದ ಕೃಷ್ಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಪರಿಶೀಲನೆ ನಡೆಸಿದ್ದು ಎರಡು ಫೈಲ್‌ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಷ್ಣ ನದಿಯ ಬ್ರಿಜ್ ರಸ್ತೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಕಳೆದ 45 ದಿನಗಳಿಂದ ಬಂದ್ ಮಾಡಲಾಗಿತ್ತು. ರಸ್ತೆ ನಿರ್ಮಾಣ ಮಾಡಿದ್ದು, ಮಾ.1 ರಿಂದ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕೇವಲ 5 ದಿನಗಳಲ್ಲಿ ಕೃಷ್ಣನದಿ ಬ್ರಿಜ್ ಮೇಲೆ ರಸ್ತೆ ಅಪಘಾತ ಸಂಭವಿಸಿರುವುದರಿಂದ ವಾಹನ ಸವಾರರು ಭಯ ಬೀತರಾಗಿದ್ದಾರೆ‌. ಕೃಷ್ಣ ನದಿ ಬ್ರಿಜ್ ಮೇಲೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

Megha News