ರಾಯಚೂರು ,ಏ೧೪-ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‌ಟಿಪಿಎಸ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಭಾರಿ ನಷ್ಟ ಉಂಟಾಗಿದೆ.
ವಿದ್ಯುತ್ ಕೇಂದ್ರದ 4 ನೇ ಘಟಕದ ಪರಿವರ್ತಕದಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿಯಿಂದು ಸುಟ್ಟು ಹೋಗಿದೆ.ಬೃಹತ್ ಜನರೇಟರ್ ಟ್ರಾನ್ಸಫಾರ್ಮರ್ ಸುಟ್ಟು ಕೋಟ್ಯಾಂತರ ರೂಪಾಯಿ ಹಾನಿಯಾದ ಘಟನೆ ರವಿವಾರ ರಾತ್ತಿ ನಡೆದಿದೆ.
ಮೂರು ತಿಂಗಳಿಂದ ಬಂದ್ ಆಗಿದ್ದ ನಾಲ್ಕನೇ ಘಟಕದಲ್ಲಿಹಾಳಾಗಿದ್ದ ಬಾಯ್ಲರ್ ಟ್ಯೂಬ್ ಬದಲಾಯಿಸಿ ರವಿವಾರವಷ್ಟೇ ಕಾರ್ಯಾರಂಭ ಮಾಡಲಾಗಿತ್ತು
ರೀಸ್ಟಾರ್ಟ್ ಮಾಡುವಾಗ ಜನರೇಟರ್‌ಗೆ ವಿದ್ಯುತ್ ಪ್ರಹರಿಸಿ ಬೆಂಕಿಹತ್ತಿಕೊಂಡಿದೆ
ವಿದ್ಯುತ್ ಉತ್ಪಾದನೆ ಬಳಿಕ ಜನರೇಟರ್ ಟ್ರಾನ್ಸಫಾರ್ಮರ್ ಮೂಲಕ ಸಾಗುವ ವಿದ್ಯುತ್ ನಿಲುಗಡೆಯಾಗಿದೆ. ಟಿಸಿ ರಿಪೇರಿಯಾಗುವವರೆಗೆ ನಾಲ್ಕನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯತೆ ಇಲ್ಲ. ಈಗಾಗಲೆ ೨೧೦ ಮೆ.ವ್ಯಾ ವಿದ್ದುತ್ ಉತ್ಪಾದಿಸುವ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಅಲ್ಕದೇ ವೈಟಿಪಿಎಸ್ ಎರಡನೇ ಘಟಕವೂ ನಿಲುಗಡೆಯಾಗಿ ಶಾಖೋತ್ಪನ್ನ ಕೇಂದ್ರಗಳ ಉತ್ಪಾದನೆ ಗಣನೀಯ ಇಳಿಕೆ ಕಂಡಿದೆ. ನಷ್ಟದ ಅಂದಾಜು ಲೆಕ್ಕ ಹಾಕಲಾಗುತ್ತಿದೆ.